ಕಕ್ಯಪದವು, 04 ಅಕ್ಟೋಬರ್ 2024: ರಂದು ಎಲ್ ಸಿ ಆರ್ ಇಂಡಿಯನ್ ವಿದ್ಯಾಸಂಸ್ಥೆಯಲ್ಲಿ ದಶಮಾನೋತ್ಸವದ ಸವಿನೆನಪಿಗಾಗಿ ಕಿಂಡರ್ ಗಾರ್ಡನ ಪ್ಲೇ ಹೌಸ್ ನ್ನು ಉದ್ಘಾಟಿಸಲಾಯಿತು.
ಶಾಲಾ ಮುಂಭಾಗದಲ್ಲಿ ನಿರ್ಮಿಸಲಾದ ಪ್ಲೇ ಹೌಸ್ ಅನ್ನು ಶಾಲಾ ಪ್ರಾಂಶುಪಾಲರಾದ ಜೋಸ್ಟನ್ ಲೋಬೋ ಮಕ್ಕಳ ಜೊತೆ ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು. ನಂತರ ಎಲ್ ಕೆ ಜಿ , ಯುಕೆಜಿ ಮತ್ತು ಒಂದನೇ ತರಗತಿಯ ಮಕ್ಕಳು ನಿರ್ಮಿಸಲಾದ ಪ್ಲೇ ಹೌಸಿನಲ್ಲಿ ಆಟ ಆಡಿ ಆನಂದಿಸಿದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಶಾಲಾ ಸಂಯೋಜಕರಾದ ಯಶವಂತ್ ಜಿ ನಾಯಕ್ ಮುಖ್ಯ ಶಿಕ್ಷಕಿಯಾದ ವಿಜಯ ಕೆ , ಶಾಲಾ ಬೋಧಕ ಬೋಧಕೇತರ ವರ್ಗದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.