ಕಕ್ಯಪದವು, 13 ಆಗಸ್ಟ್ 2025: ಪಾದೆಗುತ್ತು ಲಿಂಗಪ್ಪ ಮಾಸ್ತರ್ ಎಜುಕೇಷನಲ್ ಟ್ರಸ್ಟ್ (ರಿ).ನಿಂದ ನಡೆಸಲ್ಪಡುವ ಎಲ್.ಸಿ.ಆರ್ ಇಂಡಿಯನ್ ವಿದ್ಯಾಸಂಸ್ಥೆಯ ಪ ದವಿವಿಭಾಗದಲ್ಲಿ ಕೇಂದ್ರ ಸರ್ಕಾರದ “ನಶಾಮುಕ್ತ ಭಾರತ ಅಭಿಯಾನ” ಯೋಜನೆಯ ಐದನೇ ವಾರ್ಷಿಕೋತ್ಸವ ಆಚರಣೆಯ ಅಂಗವಾಗಿ ಮಾದಕ ವಸ್ತು ಸೇವನೆ ಮಾಡದಿರಲು ಪ್ರತಿಜ್ಞೆ ಸ್ವೀಕರಿಸಲಾಯಿತು.
ವಿದ್ಯಾಸಂಸ್ಥೆಯ ಪ್ರಾಂಶುಪಾಲರಾದ ಶ್ರೀಯುತ ಜೋಸ್ಟನ್ ಲೋಬೊ, ಸಂಯೋಜಕರಾದ ಶ್ರೀಯುತ ಯಶವಂತ್ ಜಿ ನಾಯಕ್, ಪದವಿ ಪೂರ್ವ ವಿಭಾಗದ ಮುಖ್ಯಸ್ಥೆಯಾದ ಶ್ರೀಮತಿ ಸೌಮ್ಯ ಎನ್ ಹಾಗೂ ಉಪನ್ಯಾಸಕರು ಉಪಸ್ಥಿತರಿದ್ದರು.ಪದವಿ ವಿಭಾಗದ ಮುಖ್ಯಸ್ಥೆಯಾದ ಶ್ರೀಮತಿ ದೀಕ್ಷಿತಾ ಪ್ರತಿಜ್ಞಾ ವಿಧಿಯನ್ನು ನಡೆಸಿಕೊಟ್ಟರು.