ಕಕ್ಯಪದವು, 23 ನವೆಂಬರ್ 2024: ಎಲ್.ಸಿ.ಆರ್ ಇಂಡಿಯನ್ ವಿದ್ಯಾಸಂಸ್ಥೆ ಕಕ್ಯಪದವು, ಇಲ್ಲಿನ ವಿದ್ಯಾರ್ಥಿಗಳಿಗೆ ಹದಿಹರೆಯದ ಆರೋಗ್ಯ ಮತ್ತು ಬದಲಾವಣೆ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ಮಾಹಿತಿ ಕಾರ್ಯಗಾರವನ್ನು ಅಯೋಜಿಸಲಾಯಿತು.
ಶಾಲಾ ವಿದ್ಯಾರ್ಥಿಗಳಾದ 5 ರಿಂದ 10ನೇ ತರಗತಿಯ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ತಾಲೂಕು ಸಾರ್ವಜನಿಕ ಆಸ್ಪತ್ರೆ, ಬಂಟ್ವಾಳ ಇಲ್ಲಿಯ ಆರೋಗ್ಯ ಸಲಹೆಗಾರರಾದ ಅಕ್ಷತಾ ಇವರು ಮಾಹಿತಿಯನ್ನು ನೀಡಿದರು.ಹದಿಹರೆಯದ ಖಿನ್ನತೆ, ಮಾನಸಿಕ, ದೈಹಿಕ ಬದಲಾವಣೆ ಹಾಗೂ ಆರೋಗ್ಯಕರ ಜೀವನಶೈಲಿಯನ್ನು ಬೆಳೆಸುವಂತೆ ತಿಳಿಸಿದರು. ಮಾಹಿತಿ ಕಾರ್ಯಾಗಾರದ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಂಡರು.
ಶಾಲಾ ಮುಖ್ಯ ಶಿಕ್ಷಕಿಯಾದ ವಿಜಯಾ ಕೆ ಯವರ ನೇತೃತ್ವದಲ್ಲಿ , ಸಹ ಶಿಕ್ಷಕಿಯಾದ ಲೀದಿಯಾ ಕಾರ್ಯಕ್ರಮವನ್ನು ನಿರ್ವಹಿಸಿದರು. ಶಿಕ್ಷಕ ವೃಂದದ ಉಪಸ್ಥಿತಿಯಲ್ಲಿ ಕಾರ್ಯಕ್ರಮವು ಯಶಸ್ವಿಯಾಗಿ ಸಂಪನ್ನಗೊಂಡಿತು.