ಕಕ್ಯಪದವು, 06 ಆಗಸ್ಟ್ 2025: ಪಾದೆಗುತ್ತು ಲಿಂಗಪ್ಪ ಮಾಸ್ತರ್ ಮೆಮೋರಿಯಲ್ ಎಜುಕೇಷನಲ್ ಟ್ರಸ್ಟ್ (ರಿ) ನಿಂದ ನಡೆಸಲ್ಪಡುವ ಎಲ್ ಸಿ ಆರ್ ಇಂಡಿಯನ್ ವಿದ್ಯಾಸಂಸ್ಥೆ ಕಕ್ಯಪದವು, ಇಲ್ಲಿ “ತುಳುವರ ಬದುಕಿನ ಅನಾವರಣ ” ಎಂಬ ಪರಿಕಲ್ಪನೆಯಲ್ಲಿ ವಿಶೇಷ ಕಾರ್ಯಕ್ರಮವನ್ನು ಏರ್ಪಡಿಸಿ ತರಗತಿವಾರು ಸ್ಪರ್ಧೆಯನ್ನು ನಡೆಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸಂಸ್ಥೆಯ ಅಧ್ಯಕ್ಷರಾದ ಬಬಿತಾ ಆರ್.ನಾಥ್ ಹಾಗೂ ಕಾರ್ಯದರ್ಶಿ ಶಿವಾನಿ ಆರ್ ನಾಥ್, ಟ್ರಸ್ಟಿಗಳಾದ ಯಜ್ಞೆಶ್ ರಾಜ್, ಜಯನಿ ಆರ್ ನಾಥ್ ದೀಪ ಬೆಳಗಿಸಿ ಉದ್ಘಾಟಿಸಿ ಆಟಿಕಳೆಂಜನ ಕುಣಿತದೊಂದಿಗೆ “ಆಟಿ ಕೂಟ” ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸಂಸ್ಥೆಯ ಪೂರ್ವ ಪ್ರಾಥಮಿಕ, ಪ್ರಾಥಮಿಕ, ಪ್ರೌಢ ವಿಭಾಗ, ಪದವಿ ಹಾಗೂ ಪದವಿಪೂರ್ವ ವಿಭಾಗದ ವಿದ್ಯಾರ್ಥಿಗಳಿಗೆ ಸಮೂಹ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ತುಳುನಾಡಿನ ಕಲೆ, ಸಂಸ್ಕೃತಿ, ಜೊತೆಗೆ ಆಟಿ ತಿಂಗಳ ವಿಶೇಷತೆಯನ್ನು ತಿಳಿಸುವ ಗಾದೆ ಮಾತುಗಳು,ಆಹಾರ ಪದ್ಧತಿಗಳು,ಗಿಡಮೂಲಿಕೆಗಳು ಹಾಗೂ ತುಳುವರ ಬದುಕು ಮುಂತಾದ ಪ್ರಮುಖ ಅಂಶಗಳೊಂದಿಗೆ ಸಂಪ್ರದಾಯಿಕ ಉಡುಗೆ ಧರಿಸಿ ತುಳುನಾಡಿನ ಕಥೆ, ಹಾಡು, ನೃತ್ಯದೊಂದಿಗೆ ಮನರಂಜನೆಯನ್ನು ನೀಡಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಪ್ರಾಂಶುಪಾಲರಾದ ಜೋಸ್ಟನ್ ಲೋಬೊ , ಸಂಯೋಜಕರಾದ ಯಶವಂತ್ ಜಿ.ನಾಯಕ್ ಪ್ರಾಥಮಿಕ ಮತ್ತು ಪೌಢ ವಿಭಾಗದ ಮುಖ್ಯಶಿಕ್ಷಕಿ ವಿಜಯಾ.ಕೆ, ಬೋಧಕ ಹಾಗೂ ಬೋಧಕೇತರವೃಂದ ಮತ್ತು ಪೋಷಕ ವೃಂದದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.