ಆಲಂಕಾರು, ಆಗಸ್ಟ್ 15, 2024 : ಶ್ರೀ ದುರ್ಗಾಂಬಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಬುಡೇರಿಯಾ ಗದ್ದೆಯಲ್ಲಿ ಕೆಸರ್ ಡೊಂಜಿ ದಿನ ಕಾರ್ಯಕ್ರಮ ನಡೆಸಲಾಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ರಾಷ್ಟ್ರೀಯ ಕೃಷಿ ಪ್ರಶಸ್ತಿ ಮತ್ತು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಕಡಮಜಲು ಸುಭಾಸ್ ರೈ ಮಾತನಾಡಿ ಹಿಂದಿನ ಕಾಲದ ರೈತರು ಯಾವ ರೀತಿ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದರು, ಗದ್ದೆಯ ಮಣ್ಣಿನಲ್ಲಿರುವ ಸತ್ವ ಎಂತದ್ದು, ಎಂಬುದನ್ನು ತನ್ನ ಸ್ವಂತ ಅನುಭವಗಳ ಜೊತೆಗೆ ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿದರು.

ಈ ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಆಡಳಿತ ಮಂಡಳಿಯ ಅಧ್ಯಕ್ಷರಾದ ದಯಾನಂದ ರೈ ಮನವಳಿಕೆ ಅವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಆನಂದ ಗೌಡ ಪಜ್ಜಡ್ಕ , ಕುಶಾಲಪ್ಪ ಗೌಡ ಬಡ್ಡಮೆ, ದಯಾನಂದ ಗೌಡ ಬಡ್ಡಮೆ, ಉಪಸ್ಥಿತರಿದ್ದರು. ಸಂಕಪ್ಪ ಗೌಡ ಗೌಡತ್ತಿಗೆ, ಮೋನಪ್ಪ ಗೌಡ ಗೌಡತ್ತಿಗೆ, ಮೋನಕ್ಕ ಗೌಡ ಗೌಡತ್ತಿಗೆ, ನೀಲಮ್ಮ ಗೌಡ ಸುರಲ್ತಾಡಿ ಜಾನಕಿ ಗೌಡ ಗೌಡತ್ತಿಗೆ ಅವರ ಗೌರವ ಉಪಸ್ಥಿತಿ ಇತ್ತು. ಈ ಸಂದರ್ಭದಲ್ಲಿ ಪ್ರಖ್ಯಾತ ನಾಟಿ ವೈದ್ಯರಾದ ಜಾನಕಿ ಗೌಡ ಗೌಡತ್ತಿಗೆ ಅವರನ್ನು ಸನ್ಮಾನಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಸದಸ್ಯರಾದ ದಯಾನಂದ ಗೌಡ ಆಲಡ್ಕ, ರಾಮರಾಜ ನಗ್ರಿ, ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ಈಶ್ವರ ಗೌಡ ಪಜ್ಜಡ್ಕ, ಆಡಳಿತ ಅಧಿಕಾರಿಗಳಾದ ಶ್ರೀಪತಿ ರಾವ್ ಎಚ್,ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಶ್ರೀನಾಥ್ ಗೌಡ ಕೇವಳ, ನಿವೃತ್ತ ಗ್ರಾಮ ಪಂಚಾಯತ್ ಅಧಿಕಾರಿಗಳಾದ ಜಗನ್ನಾಥ ಶೆಟ್ಟಿ ಮನವಳಿಕೆ, ಆಲಂಕಾರು ಲಯನ್ಸ್ ಕ್ಲಬ್ ನ ಕಾರ್ಯದರ್ಶಿಗಳಾದ ನಿತ್ಯಾನಂದ ಶೆಟ್ಟಿ, ಪ್ರಾಂಶುಪಾಲರಾದ ರೂಪಾ ಜೆ ರೈ, ಮುಖ್ಯ ಗುರುಗಳಾದ ನವೀನ್ ರೈ, ಉಪಸ್ಥಿತರಿದ್ದರು. ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೇಯಸ್ಸು ರೈ, ಆಂಗ್ಲ ಭಾಷೆ ಶಿಕ್ಷಕರಾದ ಜನಾರ್ದನ ಸಂಪೂರ್ಣ ಕ್ರೀಡಾಕೂಟದ ನಿರೂಪಣೆಯನ್ನು ಮಾಡಿದರು. ಹಿರಿಯ ವಿದ್ಯಾರ್ಥಿಯಾದ ರಿವಣ್ ರಾಜ್, ಹಿಂದಿ ಶಿಕ್ಷಕರಾದ ಮಹೇಶ ಲಮಾಣಿ, ಶಿಕ್ಷಕಿಯರಾದ ನಿವ್ಯ ಪಿ. ಎನ್, ಪ್ರಫುಲ್ಲ, ಅಕ್ಷತಾ, ಉಪನ್ಯಾಸಕರಾದ ನಾರಾಯಣ ಗೌಡ, ಪ್ರಶಾಂತ್ ಕುಮಾರ್, ಸ್ವಾತಿ, ಯಶ್ವಿನಿ, ಶಶಿಕಲಾ, ಆಶಾ ಡಿ.ಜಿ, ಕಚೇರಿ ಸಹಾಯಕರಾದ ಉದಯ ಚಂದ್ರಿಕಾ, ಅಡುಗೆ ಸಹಾಯಕರಾದ ಲಲಿತಾ, ಸಾವಿತ್ರಿ,ಅನಿತಾ,ಹಿರಿಯ ವಿದ್ಯಾರ್ಥಿಗಳು , ವಿದ್ಯಾರ್ಥಿಗಳ ಹೆತ್ತವರು ಪೋಷಕರು, ಊರಿನ ವಿದ್ಯಾಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡರು.

ಪ್ರದೀಪ್ ರೈ ಮನವಳಿಕೆ ಅವರ ಸಹಕಾರದಿಂದ ಕಂಬಳದ ಕೋಣಗಳನ್ನು ತಂದು ಕೆಸರುಗದ್ದೆಯಲ್ಲಿ ಓಡಿಸಿ ವಿದ್ಯಾರ್ಥಿಗಳಿಗೆ ಮನೋರಂಜನೆ ನೀಡಲಾಯಿತು.ಕನ್ನಡ ಶಿಕ್ಷಕಿಯಾದ ಅಕ್ಷತಾ ಅವರು ಕಾರ್ಯಕ್ರಮ ನಿರೂಪಿಸಿದರು. ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ವಿಜ್ಞಾನ ಶಿಕ್ಷಕಿಯಾದ ನಿವ್ಯಾ ಅವರ ಸ್ವಾಗತ ದೊಂದಿಗೆ ಆರಂಭವಾದ ಕಾರ್ಯಕ್ರಮ ಪ್ರಾಂಶುಪಾಲರಾದ ರೂಪ ಜೆ ರೈ ಅವರ ವಂದನಾರ್ಪಣೆಯೊಂದಿಗೆ ಕೊನೆಗೊಂಡಿತು. ನಂತರ ಕೆಸರುಗದ್ದೆಯಲ್ಲಿ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳಿಗೆ, ವಿದ್ಯಾರ್ಥಿಗಳ ಪೋಷಕರಿಗೆ, ಹಾಗೂ ಊರಿನ ನಾಗರಿಕರಿಗೆ ವಿವಿಧ ಮನೋರಂಜನ ಆಟಗಳನ್ನು ನಡೆಸಲಾಯಿತು.