ಕೃಷ್ಣಾಪುರ, 15 ಆಗಸ್ಟ್ 2025: ಇಲ್ಲಿನ ಸರಕಾರಿ ಪ ಪೂ ಕಾಲೇಜಿನಲ್ಲಿ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷರಾದ ಅಶೋಕ್ ಕೃಷ್ಣಾಪುರ ಧ್ವಜಾರೋಹಣ ನೆರವೇರಿಸಿದರು.

ಪ್ರಾಂಶುಪಾಲರಾದ ಅನುಸೂಯ ಕೆ ಪಿ ಅಧ್ಯಕ್ಷತೆ ವಹಿಸಿದ್ದರು.ಸಮಿತಿ ಸದಸ್ಯರಾದ ಉದ್ಯಮಿ ಎಂ ಎಸ್ ಶರೀಫ್, ಅಬ್ದುಲ್ ಅಮೀರ್, ಶರೀಫ್, ಉದ್ಯಮಿ ಮನ್ಸೂರ್ ಉಪಸ್ಥಿತರಿದ್ದರು.

ವಿದ್ಯಾರ್ಥಿ ನಾಯಕ ಮಂಜುನಾಥ್,ನಾಯಕಿ ಜೀನತ್ ಹಾಗೂ ಧನ್ಯ ಸ್ವಾತಂತ್ರ್ಯ ದಿನಾಚರಣೆ ಮಹತ್ವದ ಕುರಿತು ಮಾತನಾಡಿದರು. ಡಾ ಎ ಪಿ ಜೆ ಅಬ್ದುಲ್ ಕಲಾಂ ರೋವರ್ಸ್ ಘಟಕದ ಸಂಯೋಜಕ ರವಿಚಂದ್ರ ಕಾರ್ಯಕ್ರಮ ನಿರ್ವಹಿಸಿದರು.