ಕೃಷ್ಣಾಪುರ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಕಾಟಿಪಳ್ಳ, ಕೃಷ್ಣಾಪುರ ಇಲ್ಲಿನ ದೈಹಿಕ ಶಿಕ್ಷಕಿಯಾದ ನವೀನಾ ಇವರ ಬೀಳ್ಕೊಡುಗೆ ಕಾರ್ಯಕ್ರಮ SDMC ಅಧ್ಯಕ್ಷರು ಮತ್ತು ಹಳೆ ವಿದ್ಯಾರ್ಥಿ ಸಂಘದ ಸದಸ್ಯರ ಸಹಯೋಗದಲ್ಲಿ ಸೆಪ್ಟೆಂಬರ್ 17, 2025 ರಂದು ನಡೆಯಿತು.
SDMC ಅಧ್ಯಕ್ಷರಾದ ನರೇಶ್ ಇವರು ಸನ್ಮಾನ ಮಾಡಿದರು. ಮಾಜಿ ಕಾರ್ಪೊರೇಟರ್ ರಾದ ತಿಲಕ್ ರಾಜ್ ಇವರು ಸ್ಮರಣಿಕೆ ನೀಡಿ ಗೌರವಿಸಿದರು. ನಂತರ ಮಕ್ಕಳು ತಮ್ಮ ಅಭಿಪ್ರಾಯಗಳನ್ನು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಕಾರ್ಪೊರೇಟರ್ ರಾದ ಲಕ್ಷ್ಮಿ ಶೇಖರ್ ದೇವಾಡಿಗ, ಅಶೋಕ್, ಕರುಣಾಕರ ದೇವಾಡಿಗ, ಸತೀಶ್ ಸಲ್ಯಾನ್, SDMC ಉಪಾಧ್ಯಕ್ಷರಾದ ಪ್ರಮೀಳಾ, ಶಾಲೆಯ ಮುಖ್ಯಶಿಕ್ಷಕರಾದ ಚಂದ್ರಾವತಿ, ಹಳೆ ವಿದ್ಯಾರ್ಥಿ ಸಂಘದ ಸದಸ್ಯರು ಮತ್ತು ಪೋಷಕರು ಉಪಸ್ಥಿತರಿದ್ದರು.