ಉಜಿರೆ: ನವಂಬರ್ 01 ಶ್ರೀಧ.ಮಂ ಅನುದಾನಿತ ಸೆಕೆಂಡರಿ ಶಾಲೆ ಉಜಿರೆ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ನಡೆಯಿತು.ಶಾಲಾ ಮುಖ್ಯೋಪಾಧ್ಯಾಯರು ಸುರೇಶ್,ಕೆ ಧ್ವಜಾರೋಹಣಾ ನಿರ್ವಹಿಸಿ ದೀಪ ಬೆಳಗಿಸಿದರು. ತಾಯಿ ಭುವನೇಶ್ವರಿಗೆ ಎಲ್ಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಪುಷ್ಪಾರ್ಚನೆ ಮಾಡಿದರು
ಶಿಕ್ಷಕರಾದ ಚಂದ್ರಶೇಖರ್ ಭಟ್ ಕನ್ನಡ ರಾಜ್ಯೋತ್ಸವ ಬಗ್ಗೆ ಕರ್ನಾಟಕ ಏಕೀಕರಣದ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡಿದರು. ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ,ರಸಪ್ರಶ್ನೆ ಏರ್ಪಡಿಸಲಾಯಿತು.