ಮಂಗಳೂರು: ಶ್ರೀ ದೇವಿ ಕಾಲೇಜ್ ಆಫ್ ಫ್ಯಾಷನ್ ಡಿಸೈನ್ ಬಲ್ಲಾಳ್ಭಾಗ್ ಮಂಗಳೂರು ಇವರ ವತಿಯಿಂದ ಕನ್ನಡ ಹಬ್ಬವನ್ನು ಕಾಲೇಜಿನಲ್ಲಿ ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಗಳಾಗಿ ಎಚ್ ವಿ ಎಸ್ ಕಾಲೇಜಿನ ನಿವೃತ್ತ ಕನ್ನಡ ಪ್ರಾಧ್ಯಪಕರು ರಾಜಮಣಿ ರಾಮಕುಂಜ ಇವರು ಆಗಮಿಸಿ ಕನ್ನಡ ಭಾಷೆಯ ಮಹತ್ವವನ್ನು ಹೇಳುವುದರೂಂದಿಗೆ ಕನ್ನಡ ಮಾತೆಯನ್ನು ಕೂಂಡಾಡಿ ,ತಾನೂಬ್ಬ ಕನ್ನಡಿಗನಾಗಿರುವುದಕ್ಕೆ ಹೆಮ್ಮಯನ್ನು ವ್ಯಕ್ತಪಡಿಸಿದರು.

ಪ್ರಾಂಶುಪಾಲಾರದ ಪ್ರೊ | ಕಸ್ತೂರಿ ಜೆ ಶೆಟ್ಟಿ ಉಪಸ್ಥಿತರಿದ್ದು ಕನ್ನಡ ಭಾಷೆಯ ಪರ ತಮಗಿದ್ದ ವಿಶಿಷ್ಠ ಪ್ರೇಮವನ್ನು ವ್ಯಕ್ತಪಡಿಸುತ್ತಾ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಸಹಶಿಕ್ಷಕರಾದ ಪ್ರಭ ಶೆಟ್ಟಿ,ಸೌಜನ್ಯ ಆಚಾರ್ಯ, ಆಶಾ ಉಪಸ್ಥಿತರಿದ್ದರು ಅಮೃತ ನಿರೂಪಿಸಿದರು, ವೈಭವ್ ಸ್ವಾಗತಿಸಿದರು, ಭಾಗೀರಥಿ ನಾವಡ ಕನ್ನಡ ಭಾಷೆಯ ಮಹತ್ವ ತಿಳಿಸಿದರು, ರಕ್ಷತ್ ವಿ ಕೋಟ್ಯಾನ್ ಅತಿಥಿಯ ಪರಿಚಯ ನೀಡಿದರು, ಧಾತ್ರಿ ಆರ್ ಭಟ್ ವಂದಿಸಿದರು.

ಹಬ್ಬದ ಪ್ರಯುಕ್ತ ಅಂತರ್ ವಿಭಾಗದ ವಿದ್ಯಾರ್ಥಿಗಳಿಗೆ ಕೆಲವು ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು ಕಾರ್ಯಕ್ರಮದಲ್ಲಿ ವಿಜೇತರಿಗೆ ಬಹುಮಾನವನ್ನು ನೀಡುವುದರ ಜೊತೆಗೆ ಸಿಹಿತಿಂಡಿಯನ್ನು ನೀಡಲಾಯಿತು . ಕಾರ್ಯಕ್ರಮದ ಪ್ರಯುಕ್ತ ನಡೆಸಿದ ಅಂತರ ವಿಭಾಗ ಚರ್ಚಾ ಸ್ಪರ್ಧೆಯು ಕಾರ್ಯುಕ್ರಮದ ಚೇತನವನ್ನು ಇನ್ನಷ್ಟು ಹೆಚ್ಚಿಸಿತು. ವಿಭಾಗದ ಮಂತ್ರಿಮಂಡಲದ ಉಸ್ತುವಾರಿಯಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.