ಮೂಡಬಿದಿರೆ, 26 ಆಗಸ್ಟ್ 2025: ರೋಟರಿ ಪದವಿಪೂರ್ವ ಕಾಲೇಜು ಮೂಡಬಿದಿರೆ ಇಲ್ಲಿ ಶಾಲಾ ಶಿಕ್ಷಣ ಇಲಾಖೆ(ಪದವಿ ಪೂರ್ವ) ದ.ಕ.ಜಿಲ್ಲೆ ಮಂಗಳೂರು, ಪದವಿ ಪೂರ್ವ ಶಿಕ್ಷಣ ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ಕ್ರೀಡಾ ಕೂಟ 2025-26 ಪದವಿ ಪೂರ್ವ ವಿದ್ಯಾರ್ಥಿಗಳ ಹುಡುಗರ ಫುಟ್ಬಾಲ್ ಪಂದ್ಯಾಟದಲ್ಲಿ ಕೆ. ಪಾಂಡ್ಯ ರಾಜ್ ಬಲ್ಲಾಳ್ ಪದವಿ ಪೂರ್ವ ಕಾಲೇಜಿನ ತಂಡವು ಉಳ್ಳಾಲ ತಾಲೂಕನ್ನು ಪ್ರತಿನಿಧಿಸಿ ದ್ವಿತೀಯ ಸ್ಥಾನವನ ಗಳಿಸಿ ಕಾಲೇಜು ಹಾಗೂ ಉಳ್ಳಾಲ ತಾಲೂಕಿಗೆ ಕೀರ್ತಿಯನ್ನು ತಂದಿರುತ್ತಾರೆ . ಜೊತೆಗೆ ಈ ವಿದ್ಯಾಸಂಸ್ಥೆಯ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಾದ ಮೊಹಮ್ಮದ್ ಅನಾಸ್ , ಹಾಗೂ ಸುಹೇಲ್ ಅಹಮದ್ ಫಾರಿಶ್ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಾದ ಆಫ್ನಾನ್ ರೆಹಮಾನ್ ಅಬ್ಬಾಸ್, ಮೊಹಮ್ಮದ್ ಹುನೈನ್ ಮುಂದೆ ನಡೆಯುವ ರಾಜ್ಯ ಮಟ್ಟದ ಫುಟ್ಬಾಲ್ ಪಂದ್ಯದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಲು ಆಯ್ಕೆಗೊಂಡಿರುತ್ತಾರೆ.
ಕಾಲೇಜಿನ ರಾಷ್ಟ್ರಮಟ್ಟದ ಫುಟ್ಬಾಲ್ ತಂಡದ ಕೋಚ್ ಆಗಿರುವಂತಹ, ಯು. ಎಂ ತಮೀಮ್ ಉಳ್ಳಾಲ್ ರವರ ನೇತೃತ್ವದಲ್ಲಿ ಈ ತಂಡವು ತರಬೇತಿಯನ್ನು ಪಡೆದಿದ್ದು, ಇವರ ನೇತೃತ್ವದಲ್ಲಿ ಅನೇಕ ರಾಜ್ಯ ಹಾಗೂ ಜಿಲ್ಲಾ ಮಟ್ಟದ ಪ್ರಶಸ್ತಿಯು ಕಾಲೇಜಿಗೆ ಸಂದಿರುತ್ತದೆ.
ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಕಾಲೇಜಿನ ಆಡಳಿತ ಟ್ರಸ್ಟಿ ಆದಂತಹ ಡಾ. ಪ್ರಿಯಾ ಬಲ್ಲಾಳ್ ಕೆ , ಪ್ರಾಂಶುಪಾಲರಾದ ಶರ್ಮಿಳ ಮುಖೇಶ್ ರಾವ್ ಹಾಗೂ ಶಿಕ್ಷಕ- ಶಿಕ್ಷಕೇತರ ವೃಂದದವರು ಅಭಿನಂದಿಸಿ ಸಂತಸ ವ್ಯಕ್ತಪಡಿಸಿದರು.