- ಸುಂದರ ಹಸಿರು ಹುಲ್ಲುಗಾವಲು ಹಾಗೂ ತೆಂಗಿನ ತೋಟಗಳ ಮಧ್ಯದಲ್ಲಿ,ತಂಪಾದ ವಾತಾವರಣದಲ್ಲಿ ಕಲಿಯುವ ಅವಕಾಶವಿದೆ.
- ವಿಶಾಲವಾದ ತರಗತಿ ಕೊಠಡಿಗಳೊಂದಿಗೆ ವಿದ್ಯಾರ್ಥಿಗಳಿಗಾಗಿ ಆಡಿಯೋ ವಿಷ್ಯೂಲ್ ತರಗತಿಗಳಿವೆ.
- ವಿದ್ಯಾರ್ಥಿಗಳ ಪ್ರಗತಿಯ ಬಗ್ಗೆ ತಿಳಿಯಲು ಟ್ರ್ಯಾಕಿಂಗ್ ವ್ಯವಸ್ಥೆ ಇದೆ.
- ವಿದ್ಯಾರ್ಥಿಗಳ ಮೇಲೆ ವೈಯಕ್ತಿಕ ಗಮನಹರಿಸಲಾಗುತ್ತದೆ, ವಿಶೇಷ ಬೋಧನಾ ತರಗತಿಗಳು, ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ, ವೈಯಕ್ತಿಕ ಅಭಿವೃದ್ಧಿ, ನಾಯಕತ್ವದ ತರಬೇತಿಯ ತರಗತಿಗಳು ಸಹ ದೊರೆಯುತ್ತವೆ.
- ಅಂತೆಯೇ ಹೆಚ್ಚಿನ ಅಧ್ಯಯನಕ್ಕಾಗಿ ವಿಶಾಲವಾದ ಗ್ರಂಥಾಲಯದ ವ್ಯವಸ್ಥೆಗಳಿವೆ.
- ಕಳೆದ ಸುಮಾರು ವರ್ಷಗಳಿಂದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶಗಳು ಬಂದಿರುತ್ತದೆ.
- ಸ್ಪರ್ಧಾತ್ಮಕ ಕೋರ್ಸ್ ಗಳಾದ ಸಿ.ಇ.ಟಿ ನೀಟ್ ಹಾಗೂ ಸಿ.ಎ ತರಗತಿಗಳು,98% ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಉಚಿತ ಕಲಿಕೆಯ ಅವಕಾಶಗಳಿವೆ.
- ಹುಡುಗಿಯರಿಗಾಗಿ ಕ್ಯಾಂಪಸ್ ನಲ್ಲಿ ಹಾಸ್ಟೆಲ್ ವ್ಯವಸ್ಥೆ ಹಾಗೆಯೇ ವಿದ್ಯಾರ್ಥಿಗಳಿಗೆ ಕಾಲೇಜು ಬಸ್ ವ್ಯವಸ್ಥೆಗಳಿರುತ್ತವೆ.
- ಇಲ್ಲಿ ಕ್ರೀಡೆಗೆ ವಿಶೇಷ ಅವಕಾಶವಿದ್ದು, ಜೊತೆಗೆ ವಿದ್ಯಾರ್ಥಿಗಳಿಗಾಗಿ ಒಳಾಂಗಣ ಹಾಗೂ ಹೊರಾಂಗಣ ಕ್ರೀಡಾ ವ್ಯವಸ್ಥೆಗಳಿವೆ. ಹಾಗೆಯೇ ಇಲ್ಲಿನ ವಿದ್ಯಾರ್ಥಿಗಳು ಅನೇಕ ಬಾರಿ ಫುಟ್ಬಾಲ್ ನಲ್ಲಿ ರಾಷ್ಟ್ರ ಹಾಗೂ ರಾಜ್ಯ ಮಟ್ಟವನ್ನು ಪ್ರತಿನಿಧಿಸಿದ್ದಾರೆ.
- ಇಲ್ಲಿಯ ಫುಟ್ಬಾಲ್ ಕೋಚ್ ರಾಷ್ಟ್ರ ಮಟ್ಟವನ್ನು ಪ್ರತಿನಿಧಿಸಿದ ಕರ್ನಾಟಕ ತಂಡ ದ ಕೋಚ್ ಆಗಿರುತ್ತಾರೆ.
- ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಸಮಾನ ಪ್ರಾಮುಖ್ಯತೆ ನೀಡಲಾಗುತ್ತದೆ.
- ವಿದ್ಯಾರ್ಥಿಗಳ ಸರ್ವಂಗೀಣ ಪ್ರಗತಿಗೆ ಸಂಪನ್ಮೂಲ ವ್ಯಕ್ತಿಯಿಂದ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.
- ನುರಿತ ಶಿಕ್ಷಕರಿಂದ ಉತ್ತಮವಾದ ತರಬೇತಿಗಳು ಲಭ್ಯವಾಗುತ್ತದೆ.