ಶೀಮಂತೂರು : ಜನ್ಮಾಷ್ಟಮಿಯಂತಹ ಹಬ್ಬಗಳು ಜನರನ್ನು ಒಟ್ಟಿಗೆ ಸೇರಿಸುವಲ್ಲಿ ಮತ್ತು ಶಾಂತಿ, ಪ್ರೀತಿ ಮತ್ತು ಸೌಹಾರ್ದತೆಯ ಸಂದೇಶವನ್ನು ಹರಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಇದು ಧಾರ್ಮಿಕ ಹಬ್ಬವಾಗಿದ್ದರೂ ಸಹ ಭಾರತವು ವಿವಿಧತೆಯಲ್ಲಿ ಏಕತೆಯ ಪರಿಕಲ್ಪನೆಯನ್ನು ಎತ್ತಿಹಿಡಿಯುತ್ತದೆ ಮತ್ತು ದಿನವನ್ನು ಒಂದೇ ಮತ್ತು ಎಲ್ಲರೊಂದಿಗೆ ಆಚರಿಸುತ್ತದೆ ಎಂದು ಬಂಟರ ಸಂಘ (ರಿ) ಮೂಲ್ಕಿ ಇದರ ಅಧ್ಯಕ್ಷರಾದ ಆಶೋಕ್ ಕುಮಾರ್ ಶೆಟ್ಟಿ ತಿಳಿಸಿದರು.
ಇವರು ಶ್ರೀ ಶಾರದ ಸೆಂಟ್ರಲ್ ಸ್ಕೂಲ್, ಶಿಮಂತೂರಿನಲ್ಲಿ ನಡೆದ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಅಧ್ಯಕ್ಷತೆ ವಹಿಸಿದ ಶ್ರೀ ಶಾರದಾ ಸೊಸೈಟಿ (ರಿ) ಶಿಮಂತೂರು ಇದರ ಕೋಶಾಧಿಕಾರಿ, ಕೊ. ಭುವನಾಭಿರಾಮ ಉಡುಪ, ಅಂಧಕಾರವನ್ನು ಹೋಗಲಾಡಿಸಿ ಜನರ ಹೃದಯದಲ್ಲಿ ಸುಜ್ಞಾನದ ದೀಪವನ್ನು ಬೆಳಗಿಸುವ ಮತ್ತು ನಮ್ಮ ಜೀವನವನ್ನು ಸಂತೋಷ, ಭರವಸೆ ಮತ್ತು ಆತ್ಮವಿಶ್ವಾಸದಿಂದ ಮುನ್ನಡೆಸಲು ಯಾವಾಗಲೂ ನಮ್ಮೊಂದಿಗೆ ಇರುವ ದೈವಿಕ ಗುರು ಶ್ರೀ ಕೃಷ್ಣ ಒಬ್ಬನೇ ಅಂಥಹ ಪರಮಾತ್ಮನ ಹಬ್ಬದ ಆಚರಣೆ ಅರ್ಥಪೂರ್ಣ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಲಾ ಸಂಚಾಲಕರಾದ ದೇವಪ್ರಸಾದ್ ಪುನರೂರು, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾದ ಶಾಮಸುಂದರ ಶೆಟ್ಟಿ, ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿಗಳಿಗೆ ಮುದ್ದುಕೃಷ್ಣ, ರಾಧಾಕೃಷ್ಣ, ಯಶೋಧಕೃಷ್ಣ, ಹಾಗೂ ಕುಣಿತ ಭಜನೆ ಸ್ಪರ್ಧೆಗಳನ್ನು ಈ ಸಂದರ್ಭದಲ್ಲಿ ಏರ್ಪಡಿಸಲಾಯಿತು.ಪ್ರಾಂಶುಪಾಲರಾದ ಜಿತೇಂದ್ರ ವಿ ರಾವ್ ಪ್ರಾಸ್ತಾವಿಕ ಮಾತಿನೊಂದಿಗೆ ಸ್ವಾಗತಿಸಿದರು, ಸಹ ಶಿಕ್ಷಕಿ ವೀಣಾ ವಂದಿಸಿದರು, ವನಿತಾ ಬಹುಮಾನ ಪಟ್ಟಿ ವಾಚಿಸಿದರು, ಶ್ರೀಲತಾ ನಿರೂಪಿಸಿದರು.