ಎಲ್ ಸಿ ಆರ್ ಇಂಡಿಯನ್ ವಿದ್ಯಾಸಂಸ್ಥೆ ಕಕ್ಯಪದವು ಇಲ್ಲಿಯ ಪದವಿ ವಿಭಾಗದ ವಿದ್ಯಾರ್ಥಿಗಳಿಗೆ ವೃತ್ತಿಪರ ಶಿಕ್ಷಣದ ಮಹತ್ವ ತಿಳಿಸಿ ಕೊಡುವ ಸಲುವಾಗಿ ಇಂಟರ್ನ್ಶಿಪ್ ಹಾಗೂ ವೃತ್ತಿಪರ ಶಿಕ್ಷಣದ ಬಗ್ಗೆ ಆನ್ಲೈನ್ ವೆಬಿನಾರ್ ಅನ್ನು ಸೋನಾಲಿ ಇವರು ಕ್ಯಾಲಿಪೋಸ್ಕೋ ಇನ್ನೋವೇಶನ್ ಸಂಸ್ಥೆ ಇಂದ ನಡೆಸಿಕೊಟ್ಟರು.
ಸಂಸ್ಥೆಯ ಪ್ರಾಂಶುಪಾಲರಾದ ಜೋಸ್ಟನ್ ಲೋಬೋ, ಸಂಯೋಜಕರಾದ ಯಶವಂತ್ ಜಿ ನಾಯಕ್ ಹಾಗೂ ಉಪನ್ಯಾಸಕರು ಉಪಸ್ಥಿತರಿದ್ದರು.ಆಯಿಷತುಲ್ ರಾಫಿಯ, ಪ್ರಥಮ ಪದವಿ ವಂದಿಸಿದರು.