ಮೂಡುಬಿದ್ರಿ, ಆಗಸ್ಟ್ 15, 2024 : ದ ಯೆನೆಪೋಯ ಕಾಲೇಜು ತೋಡಾರಿನಲ್ಲಿ 78 ನೇಯ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಕಾಲೇಜಿನ ಎನ್ ಎಸ್ ಎಸ್ ಫಟಕದ ಸಹಯೋಗದೊಂದಿಗೆ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಯೆನೆಪೋಯ ತಾಂತ್ರಿಕ ಮಹಾವಿದ್ಯಾಲಯದ ಪ್ರಭಾರ ಪ್ರಾಂಶುಪಾಲರಾದ ಡಾ. ಪ್ರಭಾಕರ ಬಿ. ಕೆ. ಯವರು ಧ್ವಜಾರೋಹಣ ನೆರವೇರಿಸಿ, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಸನ್ನಿವೇಶವನ್ನು ತಿಳಿಸುತ್ತಾ, ಪ್ರಸ್ತುತ ವಿದ್ಯಮಾನಗಳ ಜೊತೆಗೆ ಸ್ವಾತಂತ್ರ್ಯದ ಅರಿವನ್ನು ಮೂಡಿಸುವ ಸಂದೇಶವನ್ನು ವಿದ್ಯಾರ್ಥಿಗಳಿಗೆ ನೀಡಿದರು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಹರೀಶ್ ಶೆಟ್ಟಿ ಹಾಗೂ ಎನ್ ಎಸ್ ಎಸ್ ಸಂಯೋಜಕರಾದ ಪ್ರೊ. ಶಿವಪ್ರಸಾದ್ , ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀ ಲೋಕೇಶ್ ರವರು ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರು ದೇಶಭಕ್ತಿ ಗೀತೆಯನ್ನು ಹಾಡಿದರು. ಕಾರ್ಯಕ್ರಮವನ್ನು ಕು. ಆಯಿಶಾ ರಿಜಾ ನಿರೂಪಿಸಿದರು.