ಕೃಷ್ಣಾಪುರ, ಆಗಸ್ಟ್ 15, 2024 : ಇಲ್ಲಿನ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಸ್ವಾತಂತ್ರ ದಿನಾಚರಣೆಯನ್ನು ಆಚರಿಸಲಾಯಿತು.ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ, ಸ್ಥಳೀಯ ಉದ್ಯಮಿ ಎಂ ಎಸ್ ಶರೀಫ್ ಧ್ವಜಾರೋಹಣಗೈದು ಸ್ವಾತಂತ್ರೋತ್ಸವದ ಸಂದೇಶ ನೀಡಿದರು.ಇವರು ಸ್ವಾತಂತ್ರ್ಯೋತ್ಸವದ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿ, ದೇಶಪ್ರೇಮ ಹಾಗೂ ದೇಶಭಕ್ತಿಯ ಮಹತ್ವ ಸಾರಿ ಎಲ್ಲರಿಗೂ ಶುಭಾಹಾರೈಸಿದರು.

ಪ್ರಾಂಶುಪಾಲೆ ಅನುಸೂಯ ಕೆ ಪಿ ಅಧ್ಯಕ್ಷತೆ ವಹಿಸಿದ್ದರು.ಅಭಿವೃದ್ಧಿ ಸಮಿತಿ ಸದಸ್ಯ ಶರೀಫ್,ರೋವರ್ಸ್ ಲೀಡರ್ ಸಮಾಜಶಾಸ್ತ್ರ ಉಪನ್ಯಾಸಕ ರವಿಚಂದ್ರ,ಇತಿಹಾಸ ಉಪನ್ಯಾಸಕಿ ಪೂರ್ಣಿಮಾ ಕಾಮತ್, ರಾಜ್ಯಶಾಸ್ತ್ರ ಉಪನ್ಯಾಸಕಿ ಮಮತಾ ಎಚ್, ರಸಾಯನ ಶಾಸ್ತ್ರ ಉಪನ್ಯಾಸಕಿ ವಾಣಿ ಕುಮಾರಿ, ಆಂಗ್ಲ ಭಾಷಾ ಉಪನ್ಯಾಸಕಿ ಪ್ರಮೀಳಾ ಕುಟಿನ್ಹಾ, ವಾಣಿಜ್ಯ ಶಾಸ್ತ್ರ ಉಪನ್ಯಾಸಕಿ ಡಾ ಪ್ರತಿಮಾ ಭಟ್, ಜೀವ ಶಾಸ್ತ್ರ ಉಪನ್ಯಾಸಕಿ ಶಾಂತಲಾ ಟಿ ಉಪಸ್ಥಿತರಿದ್ದರು.

ಹಿರಿಯ ಉಪನ್ಯಾಸಕ ವೀರೇಶ್ ಬೇಕಲ್ ರವರ ಸ್ವಾಗತದೊಂದಿಗೆ ಪ್ರಾರಂಭವಾದ ಕಾರ್ಯಕ್ರಮ, ಅರ್ಥಶಾಸ್ತ್ರ ಉಪನ್ಯಾಸಕ ನೂರ್ ಮಹಮ್ಮದ್ ರವರ ವಂದನಾರ್ಪಣೆಯೊಂದಿಗೆ ಸುಸೂತ್ರವಾಗಿ ಮುಕ್ತಾಯವಾಯಿತು.. ಗಣಿತ ಶಾಸ್ತ್ರ ಉಪನ್ಯಾಸಕ ಸುಧೀರ್ ಅಚ್ಚುಕಟ್ಟಾಗಿ ಕಾರ್ಯಕ್ರಮ ನಿರ್ವಹಿಸಿದರು.