ರಾಷ್ಟ್ರೀಯ ಸೇವಾ ಯೋಜನೆಯಿಂದ ಬದುಕು ರೂಪಿಸಿಕೊಳ್ಳಲು ಸಾಧ್ಯ: ಡಾ. ನಾಗರತ್ನ ಕೆ. ಎ.
ಮೂಲ್ಕಿ, ಸಪ್ಟೆಂಬರ್ 30, 2024: ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವಲ್ಲಿ ಸಹಕಾರಿ. ಪ್ರತಿಫಲ ಪೇಕ್ಷೆ ಇಲ್ಲದೆ ಮಾಡಿದ ಸೇವೆ ನಮಗೆ ಯಶಸ್ಸನ್ನು ತಂದುಕೊಡುತ್ತದೆ. ವಿದ್ಯಾರ್ಥಿಗಳ ಪ್ರತಿಭೆಗೆ ಒಂದು ಅವಕಾಶವನ್ನು ಕಲ್ಪಿಸಿ ಕೊಟ್ಟು, ಅವರ ಬದುಕು ರೂಪಿಸಿಕೊಳ್ಳಲು ರಾಷ್ಟ್ರೀಯ ಸೇವಾ ಯೋಜನೆ ಭದ್ರಬುನಾದಿ ಇದ್ದಂತೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆಯ ನಿಕಟಪೂರ್ವ ಸಂಯೋಜಕರಾದ ಡಾ. ನಾಗರತ್ನ ಕೆವಿ ತಿಳಿಸಿದರು.
ಇವರು ದಿನಾಂಕ 30/ 9/ 2024ನೇ ಸೋಮವಾರದಂದು ವಿಜಯ ಕಾಲೇಜು, ಮೂಲ್ಕಿ ಇಲ್ಲಿಯ ರಾಷ್ಟ್ರೀಯ ಸೇವಾ ಯೋಜನ ಘಟಕದ ವಾರ್ಷಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ನೆರವೇರಿಸಿ ಮಾತನಾಡಿದರು..
ಮುಖ್ಯ ಅತಿಥಿಗಳಾಗಿ ಕರಾವಳಿ ಯುವಕ ಯುವತಿವೃಂದ ರಿ. ಹೆಜಮಾಡಿ ಇದರ ಗೌರವ ಪ್ರಧಾನ ಕಾರ್ಯದರ್ಶಿಯಾದ ಶ್ರೀ ಶರಣ್ ಕುಮಾರ್ ಮಟ್ಟು ಇವರು ಮಾತನಾಡಿ, ಶಿಕ್ಷಣ ಹಾಗೂ ಸೇವೆಯ ಮಹತ್ವವನ್ನು ತಿಳಿಸಿ, ಉತ್ತಮ ಶಿಕ್ಷಣದಿಂದ ಸಮಾಜ ಸೇವೆ ಸಾಧ್ಯ ಹಾಗೂ ಯಶಸ್ಸು ನಮ್ಮದಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪ್ರಾಂಶುಪಾಲರಾದ ಪ್ರೊಫೆಸರ್ ವೆಂಕಟೇಶ್ ಭಟ್ ಇವರು ಮಾತನಾಡಿ ರಾಷ್ಟ್ರೀಯ ಸೇವಾ ಯೋಜನೆ ಯ ಮಹತ್ವವನ್ನು ತಿಳಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾದ ವಿಜಯ ಕಾಲೇಜು ಆಡಳಿತ ಮಂಡಳಿ ಸದಸ್ಯರಾದ ಶ್ರೀ ಎಂ. ಬಿ. ಖಾನ್, ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಡಾ. ಶೈಲಜಾ ವೈವಿ, ರಾಸೆ.ಯೊ. ಕಾರ್ಯದರ್ಶಿ ಆದಿತ್ಯ ಉಪಸ್ಥಿತರಿದ್ದರು.
ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಕು. ಅರುಣ ಇವರು ಪ್ರಾಸ್ತಾವಿಕ ಮಾತನಾಡಿ ಎಲ್ಲರನ್ನೂ ಸ್ವಾಗತಿಸಿದರು, ಕಾರ್ಯದರ್ಶಿ ಕುಮಾರ ಶ್ರಾವ್ಯ ಜೆ ಇವರು ವಂದಿಸಿದರು. ಸ್ವಯಂ ಸೇವಕಿ ಕುಮಾರಿ ಸಿಂಚನ ಇವರು ಕಾರ್ಯಕ್ರಮ ನಿರೂಪಿಸಿದರು.