ಸಂಪನ್ಮೂಲ ವ್ಯಕ್ತಿಯಾಗಿ ತ್ರಸ್ಟ್ ಅಕಾಡೆಮಿಯ ಸಂಸ್ತಾಪಕರಾದ ಶ್ರೀ ಕಾರ್ತಿಕ್ ಆಳ್ವ
ಮೂಡ್ಲಕಟ್ಟೆ, 29 ಏಪ್ರಿಲ್ 2025: ಐಎಂಜೆ ವಿಜ್ಞಾನ ಮತ್ತು ವಾಣಿಜ್ಯ ಸಂಸ್ಥೆಯ ಟ್ರೈನಿಂಗ್ ಅಂಡ್ ಪ್ಲೇಸ್ಮೆಂಟ್ ವಿಭಾಗವು ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ‘ಗೇಟ್ ವೇ ಟು ಎವಿಯೇಷನ್ ಕರಿಯರ್ಸ್’ ಎನ್ನುವ ವಿಷಯದ ಕುರಿತು ಕಾರ್ಯಾಗಾರ ಹಮ್ಮಿಕೊಂಡಿತ್ತು.
ತ್ರಸ್ಟ್ ಅಕಾಡೆಮಿಯ ಸಂಸ್ತಾಪಕರಾದ ಶ್ರೀ ಕಾರ್ತಿಕ್ ಆಳ್ವ ರವರು ಎವಿಯೇಷನ್ ವಲಯದಲ್ಲಿ ಇರುವ ವಿಪುಲ ಅವಕಾಶಗಳ ಬಗ್ಗೆ ಉಪಯುಕ್ತ ಮಾಹಿತಿಯನ್ನು ವಿದ್ಯಾರ್ಥಿಗಳ ಜೊತೆ ಹಂಚಿಕೊಂಡರು. ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಎವಿಯೇಷನ್ ಉದ್ದಿಮೆ, ಲಭ್ಯವಿರುವ ಉದ್ಯೋಗ ಅವಕಾಶಗಳು, ಅದಕ್ಕೆ ಬೇಕಾದ ಸಕಲ ತಯಾರಿ ಹೀಗೆ ಹಲವು ವಿಷಯವನ್ನು ತಿಳಿಸಿದರು. ಪದವಿ ಜೊತೆಯಲ್ಲಿ ಉದ್ಯೋಗಕ್ಕೆ ನೇರವಾಗುವ ವೈವಿದ್ಯ ಕೋರ್ಸ್ ಗಳನ್ನು ನೀಡುತ್ತಿರುವ ಸಂಸ್ಥೆಯ ಕಾರ್ಯವೈಖರಿಯನ್ನು ಶ್ಲಾಗಿಸಿದರು. ಕಾರ್ಯಾಗಾರದ ನಂತರ ಆಸಕ್ತಿ ಹೊಂದಿದ ವಿದ್ಯಾರ್ಥಿಗಳನ್ನು ಗುರುತಿಸಿ ನೇರ ಸಂದರ್ಶನವನ್ನು ನೆಡೆಸಲಾಯಿತು.
ಈ ಕಾರ್ಯಕ್ರಮದಲ್ಲಿ ಕಾಲೇಜಿನ ಉಪ ಪ್ರಾಂಶುಪಾಲರಾದ ಟ್ರೈನಿಂಗ್ ಅಂಡ್ ಪ್ಲೇಸ್ಮೆಂಟ್ ನ ಮುಖ್ಯಸ್ಥರಾದ ಶ್ರೀ ಜಯಶೀಲ್ ಕುಮಾರ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಇಂಗ್ಲೀಷ್ ಉಪನ್ಯಾಸಕಿ ಹಾಗೂ ಟ್ರೈನಿಂಗ್ ಅಂಡ್ ಪ್ಲೇಸ್ಮೆಂಟ್ ನ ಸಹ ಸಂಯೋಜಕಿ ಕು. ರಾಜೇಶ್ವರಿ ಶೆಟ್ಟಿ ನಿರೂಪಿಸಿದರು.