ಮೂಡ್ಲಕಟ್ಟೆ, 22 ಫೆಬ್ರವರಿ 2025: ಐಎಂಜೆ ವಿಜ್ಞಾನ ಮತ್ತು ವಾಣಿಜ್ಯ ಸಂಸ್ಥೆಯ ಟ್ರೈನಿಂಗ್ ಅಂಡ್ ಪ್ಲೇಸ್ಮೆಂಟ್ ವಿಭಾಗವು ದ್ವಿತೀಯ ವರ್ಷದಲ್ಲಿ ಓದುತ್ತಿರುವ ಬಿ. ಕಾಂ, ಬಿ.ಸಿ.ಎ ಮತ್ತು ಬಿ.ಬಿ.ಎ ವಿದ್ಯಾರ್ಥಿಗಳಿಗೆ ಕ್ಯಾಂಪಸ್ ಪ್ಲೇಸ್ಮೆಂಟ್ ಗೆ ಸಂಬಂಧಿಸಿದಂತೆ ವಿವಿದ ವಿಷಯದ ಕುರಿತು ಐದು ದಿನದ ತರಬೇತಿ ಕಾರ್ಯಗಾರವನ್ನು ತ್ರಸ್ಟ್ ಅಕಾಡೆಮಿ ಮಂಗಳೂರು ಇವರೊಂದಿಗೆ ಹಮ್ಮಿಕೊಂಡಿತ್ತು.
ದಿನಾಂಕ 17-02-2025 ರಂದು ಉದ್ಘಾಟನೆಯೊಂದಿಗೆ ಪ್ರಾರಂಭಗೊಂಡ ಈ ತರಬೇತಿ ಕಾರ್ಯಗಾರವು ವಿವಿದ ಹಂತವನ್ನು ಒಳಗೊಂಡಿತ್ತು ಗುಂಪು ಚರ್ಚೆ, ರೆಸ್ಯೂಮ್ ಬಿಲ್ಡಿಂಗ್, ಸೋಶಿಯಲ್ ಪ್ರೊಫೈಲ್ ಬಿಲ್ಡಿಂಗ್, ನೇರ ಸಂದರ್ಶನ ಹೀಗೆ ಹಲವು ತರಬೇತಿಯನ್ನು ನೀಡಲಾಯಿತು. ಫೆಬ್ರವರಿ 21ರಂದು ನಡೆದ ಸಮಾರೋಪ ಸಮಾರಂಭದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ 5 ದಿನ ತರಬೇತಿಯನ್ನು ನೀಡಿದ ತ್ರಸ್ಟ್ ಅಕಾಡೆಮಿಯ ಸ್ಥಾಪಕರಾದ ಶ್ರೀ ಕಾರ್ತಿಕ್ ಆಳ್ವಾರವರು, ಮಾತನಾಡುತ್ತಾ ಕಾಲೇಜು ಕ್ಯಾಂಪಸ್ ಪ್ಲೇಸ್ಮೆಂಟ್ ತರಬೇತಿ ಗೆ ಸಂಬಂಧಿಸಿದಂತೆ ಪ್ರೋತ್ಸಾಹಿಸುತ್ತಿರುವ ಬಗ್ಗೆ ಶ್ಲಾಘಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಪ್ರತಿಭಾ ಎಂ ಪಾಟೀಲ್, ‘ಕಾರ್ಯಗಾರದಲ್ಲಿ ಪಡೆದು ಕೊಂಡ ತರಬೇತಿಯಿಂದ ಮುಂದಿನ ದಿನಗಳಲ್ಲಿ ಉದ್ಯೋಗ ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ’ ಎಂದರು. ಉಪ ಪ್ರಾಂಶುಪಾಲರು ಹಾಗೂ ಪ್ಲೇಸ್ಮೆಂಟ್ ಆಫೀಸರ್ ಆದ ಶ್ರೀ ಜಯಶೀಲ್ ಕುಮಾರ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಪ್ಲೇಸ್ಮೆಂಟ್ ಸಹ ಸಂಯೋಜಕರು ಹಾಗೂ ಇಂಗ್ಲಿಷ್ ಉಪನ್ಯಾಸಕರಾದ ಕು. ರಾಜೇಶ್ವರಿ ಆರ್ ಶೆಟ್ಟಿ ಯವರು ನಿರೂಪಿಸಿದರು.