ಮೂಡ್ಲಕಟ್ಟೆ, 9 ಮೇ 2025: ಐಎಂಜೆ ವಿಜ್ಞಾನ ಮತ್ತು ವಾಣಿಜ್ಯ ಸಂಸ್ಥೆಯಲ್ಲಿ ಯುವ ರೆಡ್ ಕ್ರಾಸ್ ಘಟಕವು ಭಾರತೀಯ ರೆಡ್ ಕ್ರಾಸ್ ಘಟಕ, ಕುಂದಾಪುರ ಇದರ ಸಹಯೋಗದೊಂದಿಗೆ ‘ವಿಶ್ವ ರೆಡ್ ಕ್ರಾಸ್ ದಿನಾಚರಣೆ’ ಯನ್ನು ಆಚರಿಸಲಾಯಿತು. ದೀಪ ಬೆಳಗಿಸುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಕಾರ್ಯಕ್ರಮದ ಮುಖ್ಯ ಅತಿಥಿ ಭಾರತೀಯ ರೆಡ್ ಕ್ರಾಸ್ ಘಟಕ, ಕುಂದಾಪುರ ಇದರ ಮುಖ್ಯಸ್ಥರಾದ ಶ್ರೀ ಜಯಕರ ಶೆಟ್ಟಯವರು, ರೆಡ್ ಕ್ರಾಸ್ ಸಂಸ್ಥೆಯ ಚರಿತ್ರೆ ಅದು ವಿಶ್ವದಾದ್ಯಂತ ವ್ಯಾಪಿಸಿಕೊಂಡು ವಿವಿಧ ಕ್ಷೇತ್ರಗಳಲ್ಲಿ ನಿರ್ವಹಿಸಿದ ಕಾರ್ಯಗಳು, ವ್ಯಾಪ್ತಿ ಮತ್ತು ಮಹತ್ವವನ್ನು ತಿಳಿಸಿದರು. ಅಲ್ಲದೆ ರೆಡ್ ಕ್ರಾಸ್ ಸಂಸ್ಥೆಯ ಮುಖ್ಯ ಧೋರಣೆ ಯನ್ನು ವಿವರಿಸುತ್ತ ಯುದ್ದ, ಪ್ರವಾಹ ಹಾಗು ಕಷ್ಟದ ಸಂದರ್ಭದಲ್ಲಿ ಸಂಕಷ್ಟಕ್ಕೀಡಾದ ಅಸಹಾಯಕರಿಗೆ ಸಹಾಯವನ್ನು ಮಾಡುವುದು. ಮಾನವೀಯತೆಯನ್ನು ತೋರಿ ಅವರಿಗೆ ಶುಶ್ರೂಷೆಯನ್ನು ಮಾಡುವುದು. ದೇಶ ಧರ್ಮವನ್ನು ಮೀರಿ ಮನುಷತ್ವಕ್ಕೆ ಹಾಗೂ ಮಾನವೀಯತೆಗೆ ಮೊದಲ ಆದ್ಯತೆಯನ್ನು ನೀಡುವುದು ಎಂದು ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಉಪ ಪ್ರಾಂಶುಪಾಲರಾದ ಶ್ರೀ ಜಯಶೀಲ್ ಕುಮಾರ್, ರೆಡ್ ಕ್ರಾಸ್ ನ ಆಶಯ ಮತ್ತು ತತ್ವಗಳು ಇವತ್ತಿನ ದಿನಗಳಲ್ಲಿ ಅತಿ ಮುಖ್ಯವೆಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಭಾರತೀಯ ರೆಡ್ ಕ್ರಾಸ್ ಸೊಸೈಟಿಯ ಕಾರ್ಯದರ್ಶಿ ಶ್ರೀ ಸತ್ಯನಾರಾಯಣ ಪುರಾಣಿಕ್, ರೆಡ್ ಕ್ರಾಸ್ ಘಟಕದ ಸಂಯೋಜಕರು ಹಾಗೂ ಗಣಕ ಶಾಸ್ತ್ರ ಉಪನ್ಯಾಸಕಿಯಾದ ಕು. ಶ್ರೀನಿಧಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ದ್ವಿತೀಯ ಬಿಕಾಂನ ವಿದ್ಯಾರ್ಥಿನಿ ಕು. ಅಲ್ಫೀಧಾ ನಿರೂಪಿಸಿದರು.