ಉಳ್ಳಾಲ, ಆಗಸ್ಟ್ 15, 2024 : ಕೆ. ಪಾಂಡ್ಯರಾಜ್ ಬಲ್ಲಾಳ್ ಪದವಿ ಪೂರ್ವ ಕಾಲೇಜಿನಲ್ಲಿ 15 ನೇ ಆಗಸ್ಟ್ 2024 ರಂದು 78 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಘನತೆ ಮತ್ತು ಗೌರವದಿಂದ ಆಚರಿಸಲಾಯಿತು. ಬೆಳಿಗ್ಗೆ 9.30 ಕ್ಕೆ ಕಾಲೇಜಿನ ವಿದ್ಯಾರ್ಥಿಗಳು ಶಿಕ್ಷಕರು – ಸಿಬ್ಬಂದಿ ವರ್ಗ ಹಾಗೂ ಕೆ .ಪಾಂಡ್ಯರಾಜ್ ಬಲ್ಲಾಳ್ ನರ್ಸಿಂಗ್ ಕಾಲೇಜಿನ ಸಿಬ್ಬಂದಿಗಳು ಕಾಲೇಜಿನ ಕ್ರೀಡಾಂಗಣದಲ್ಲಿ ಸೇರಿದ್ದು, ಕಾಲೇಜಿನ ಆವರಣವನ್ನು ತ್ರಿವರ್ಣ ಬಣ್ಣದ ಕರಕುಶಲಗಳ ಮೂಲಕ ಅಲಂಕರಿಸಿದ್ದರು .
ಮುಖ್ಯ ಅತಿಥಿಗಳಾಗಿ ಆಗಮಿಸಿದ ಕೆ.ಪಾಂಡ್ಯರಾಜ್ ಬಲ್ಲಾಳ್ ಸಂಸ್ಥೆಗಳ ಆಡಳಿತ ಟ್ರಸ್ಟಿ ಡಾ.ಪ್ರಿಯಾ ಬಲ್ಲಾಳ್ ಕೆ ಧ್ವಜಾರೋಹಣ ಮಾಡಿದರು. ನಂತರ ವಿದ್ಯಾರ್ಥಿಗಳು ಒಟ್ಟಾಗಿ ದೇಶಭಕ್ತಿ ಗೀತೆ ಹಾಡುವುದರ ಜೊತೆಗೆ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರ ವೇಷಭೂಷಣ ಗಳೊಂದಿಗೆ ದೇಶಭಕ್ತಿಯನ ಪಸರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಕಾಲೇಜಿನ ಆಡಳಿತ ಟ್ರಸ್ಟಿಯಾದ ಡಾ. ಪ್ರಿಯಾ ಬಲ್ಲಾಳ್ ಕೆ ಅವರು ತಮ್ಮ ಸ್ಪೂರ್ತಿದಾಯಕ ಮಾತುಗಳಿಂದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ತಿರಂಗದಲ್ಲಿ ಇರುವ ಬಣ್ಣಗಳು ಹಾಗೂ ಅದರ ಮಹತ್ವಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟು ತಮ್ಮ ಜೀವನದಲ್ಲಿ ಅದನ್ನು ಹೇಗೆ ಅಳವಡಿಸಿಕೊಳ್ಳಬೇಕು ಎಂಬುದನ್ನು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ಶರ್ಮಿಳಾ ಮುಕೇಶ್ ರಾವ್ ರವರು 78ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ನಶಾ ಮುಕ್ತ ಭಾರತ ಯೋಜನೆಯಡಿ ಮಾದಕ ವಸ್ತು ಸೇವನೆಯಿಂದ ಆಗುವ ಕೆಡುಕುಗಳ ಬಗ್ಗೆ ವಿದ್ಯಾರ್ಥಿಗಳ ಮನಸಲ್ಲಿ ಜಾಗೃತಿ ಮೂಡಿಸಿದರು. ಹಾಗೂ ಮಾದಕ ವಸ್ತು ಸೇವನೆ ಮಾಡದೆ ನಶಾ ಮುಕ್ತ ಭಾರತವನ್ನಾಗಿ ಮಾಡುತ್ತೇವೆ ಎಂದು ಕಾಲೇಜಿನಲ್ಲಿ ನೆರೆದಿದ್ದವರೆಲ್ಲರೂ ಪ್ರತಿಜ್ಞೆಯನ್ನು ಮಾಡಿದರು.
ಕಾರ್ಯಕ್ರಮದಲ್ಲಿ ಕೆ. ಪಾಂಡ್ಯರಾಜ್ ಬಲ್ಲಾಳ್ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಸೋನಿಯಾ ಸೆಬ್ಯಾಸ್ಟಿನ್ ಅವರು ಹಾಗೂ ನರ್ಸಿಂಗ್ ಕಾಲೇಜಿನ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾದ ಸಿಮ್ರಾ ಹಾಗೂ ರಾಶ್ ನಿರೂಪಿಸಿದರು.