ಉಜಿರೆ, ಸೆಪ್ಪೆಂಬರ್ 14, 2024 : ಶ್ರೀ ಧ.ಮಂ ಅನುದಾನಿತ ಸೆಕೆಂಡರಿ ಶಾಲೆ ಉಜಿರೆ ಶಾಲೆಯಲ್ಲಿ ಹಿಂದಿ ದಿವಸ ಆಚರಿಸಲಾಯಿತು.ಮುಖ್ಯ ಆತಿಥಿಗಳಾಗಿ ಆಗಮಿಸಿದ ಶ್ರೀಮತಿ ಶೃತಿ ಮಣಕೀಕರ್ ಸಹಾಯಕ ಪ್ರಾಧ್ಯಾಪಕರು ಶ್ರೀ ಧ.ಮಂ ಮಹಾ ವಿದ್ಯಾಲಯ ,ಉಜಿರೆ ಇವರು ಮಾತಾಡಿ ಭಾರತವು ಜಾತ್ಯಾತೀತ ರಾಷ್ಟ್ರವಾಗಿದೆ.
ಇಲ್ಲಿ ಹಲವಾರು ಭಾಷೆಗಳು ತನ್ನದೇ ಆದ ಪ್ರಾಮುಖ್ಯತೆಯನ್ನು ಪಡೆದಿದೆ. ಪ್ರತಿಯೊಬ್ಬರು ತನ್ನ ರಾಷ್ಟ್ರಭಾಷೆಯನ್ನು ಪ್ರೀತಿಸಿ, ಗೌರವಿಸಿ,ಹುಟ್ಟಿದ ಕೂಡಲೇ ಯಾವುದೇ ಭಾಷೆ ಕಲಿತಿರುವುದಿಲ್ಲ ಬೆಳಯುತ್ತಾ ಹೋದಂತೆ ಎಲ್ಲವೂ ಆರ್ಥವಾಗುತ್ತದೆ, ವಿದ್ಯಾಥಿಗಳಿಗೆ ಪ್ರತಿಜ್ಞೆ ಬೋಧಿಸಿದರು ಎಲ್ಲರನ್ನು ಸಹೋದರ ಸಹೋದರಿಯರಂತೆ ನೋಡಿ ಉತ್ತಮ ಬಾತೃತ್ವ ಬೆಳೆಸಿಕೊಳ್ಳಿ ಎಂದು ಕರೆಕೊಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿರುವ ಮುಖ್ಯೋಪಾಧ್ಯಾಯರಾದ ಶ್ರೀ ಕೆ.ಸುರೇಶ್ ರವರು ಹಿಂದಿ ಭಾಷೆಯ ಮಹತ್ವವನ್ನು ತಿಳಿಸಿದರು.ಹಿಂದಿ ಭಾಷಾ ಶಿಕ್ಷಕರಾದ ಶ್ರೀ ಮೋನಪ್ಪ ಪ್ರಸ್ತಾವಿಕ ಭಾಷಣ ಮಾಡಿದರು. 8ನೇ ತರಗತಿಯ ವಿದ್ಯಾರ್ಥಿನಿಯರು ಪ್ರಾರ್ಥನೆ ಮಾಡಿದರು ವಿದ್ಯಾರ್ಥಿಗಳಾದ ನಯನ್ ಕುಮಾರ್ 10ನೇ ತರಗತಿ ಸ್ವಾಗತಿಸಿದರು. ಫಾತಿಮತ್ ಶೈಮಾ 9ನೇ ತರಗತಿ ಧನ್ಯವಾದ ಸಮರ್ಪಿಸಿದರು. ರಕ್ಷಿತಾ 9ನೇ ತರಗತಿ ಕಾರ್ಯಕ್ರಮ ನಿರೂಪಿಸಿದರು.