ಕಕ್ಯಪದವು, ಆಗಸ್ಟ್ 20, 2024 : ಭಾರತದ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ 80 ನೇ ಜನ್ಮ ವಾರ್ಷಿಕೋತ್ಸವವನ್ನು ಗುರುತಿಸುತ್ತಾ, ಎಲ್ಲಾ ಧರ್ಮಗಳ ಭಾರತೀಯ ಜನರಲ್ಲಿ ರಾಷ್ಟ್ರೀಯ ಏಕೀಕರಣ, ಶಾಂತಿ, ವಾತ್ಸಲ್ಯ ಮತ್ತು ಸೌಹಾರ್ದತೆಯನ್ನು ಉತ್ತೇಜಿಸುವ ಉದ್ದೇಶದಿಂದ ಈ ದಿನವನ್ನು ‘ಸದ್ಭಾವನಾ ದಿನ ‘ಎಂದು ಆಚರಿಸಲಾಗುತ್ತದೆ.
ಇದರ ಅಂಗವಾಗಿ ಎಲ್ ಸಿ ಆರ್ ವಿದ್ಯಾಸಂಸ್ಥೆಯಲ್ಲಿ ಪ್ರತಿಜ್ಞೆಯನ್ನು ಸ್ವೀಕರಿಸಲಾಯಿತು.ಸಂಸ್ಥೆಯ ಪ್ರಾಂಶುಪಾಲರಾದ ಜೋಸ್ಟನ್ ಲೋಬೋ, ಸಂಯೋಜಕರಾದ ಯಶವಂತ್ ಜಿ ನಾಯಕ್ ಉಪಸ್ಥಿತರಿದ್ದರು.ನಮ್ಮ ಶಾಲಾ ಸಹ ಶಿಕ್ಷಕಿಯಾದ ಸಂಗೀತ ಪ್ರತಿಜ್ಞಾ ವಿಧಿಯನ್ನು ನಡೆಸಿಕೊಟ್ಟರು. ವಿದ್ಯಾರ್ಥಿಗಳಿಗೆ ಸದ್ಭಾವನ ದಿನದ ಮಹತ್ವವನ್ನು ಶಾಲಾ ಶಿಕ್ಷಕಿಯಾದ ದಿವ್ಯಶ್ರೀ ತಿಳಿಸಿಕೊಟ್ಟರು.