ವಿದ್ಯಾರ್ಥಿಗಳ ಸಾಹಸ ಪ್ರದರ್ಶನ, ಸಾಂಸ್ಕೃತಿಕ ವೈವಿದ್ಯ
ನೆತ್ತರಕೆರೆ, 7 ಡಿಸೆಂಬರ್ 2025: ಬಂಟ್ವಾಳ ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಳ್ಳಿಗೆ, ನೆತ್ತರಕೆರೆ ಇಲ್ಲಿನ ಶಾಲಾ ವಾರ್ಷಿಕೋತ್ಸವ ಸಮಾರಂಭವು ವಿವಿಧ ವೈವಿದ್ಯಮಯ ಕಾರ್ಯಕ್ರಮಗಳೊಂದಿಗೆ ಆದಿತ್ಯವಾರ ಅದ್ದೂರಿಯಾಗಿ ನಡೆಯಿತು.
ಬೆಳಿಗ್ಗೆ ಕಾರ್ಯಕ್ರಮವನ್ನು ಉದ್ಘಾಟಿಸಿದ ಎಡುವೆಂಚರ್ ಪಿ ಯು ಕಾಲೇಜಿನ ಪ್ರಾಂಶುಪಾಲ ಮಹೇಶ್ ಕೆ ಪುತ್ತೂರು ಮಾತನಾಡಿ, ಉತ್ತಮ ಸಂಸ್ಕಾರವಿದ್ದ ಕಡೆ ಒಳ್ಳೆಯ ಶಿಕ್ಷಣ ಸಿಗುತ್ತದೆ, ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯೂ ವಿಭಿನ್ನ ಪ್ರತಿಭೆ ಇದ್ದು, ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರವು ಮಹತ್ವದ್ದಾಗಿದೆ, ಜೀವನದುದ್ದಕ್ಕೋ ಸಂಸ್ಕಾರ ಉಳಿಸಿಕೊಡು ಸಮಾಜದಲ್ಲಿ ಸತ್ಪ್ರಜೆಗಳಾಗಿ ಎಂದು ಹೇಳಿ ಶುಭ ಹಾರೈಸಿದರು. ಎಲೆಕ್ಟ್ರಿಕಲ್ ಗುತ್ತಿಗೆದಾರ ಕಿಶೋರ್ ಕುಮಾರ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಶಾಲೆಯಿಂದ ವರ್ಗಾವಣೆಗೊಂಡ ಶಿಕ್ಷಕಿ ಅನಿತಾ ಸ್ಯಾಂಡ್ರಾ ಮೋನಿಸ್ ಇವರಿಗೆ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು. ಪೋಷಕರಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆಯಿತು.
ಸಂಜೆ ನಡೆದ ಬಹುಮಾನ ವಿತರಣೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಉದ್ಯಮಿ, ದಾನಿ ಚಿಕ್ಕರಾಜೇಂದ್ರ ಶೆಟ್ಟಿ ಮುಂಡಾಜೆಗುತ್ತು ಮಾತನಾಡಿ, ಸರಕಾರಿ ಶಾಲೆ ಎಂಬ ಕೇಳರಿಮೆ ಯಾವತ್ತೂ ಬೇಡ ಇಂದು ಉನ್ನತ ಹುದ್ದೆ, ಸ್ಥಾನಮಾನದಲ್ಲಿರುವವರು ಎಲ್ಲರೂ ಸರಕಾರಿ ಶಾಲೆಯಲ್ಲಿ ಕಲಿತ ಸಂಸ್ಕಾರವಂತರು, ಈ ಶಾಲೆಯಲ್ಲಿ ಕಲಿತ ನನಗೆ ಇಲ್ಲಿನ ಋಣ ಸಂದಾಯ ಮಾಡುವ ಕರ್ತವ್ಯ ಇದೆ, ಮುಂದಿನ ದಿನಗಳಲ್ಲಿಯೂ ಈ ಶಾಲೆಯ ಅಭಿವೃದ್ಧಿಗೆ ಮತ್ತಷ್ಟು ಸಹಕಾರ ನೀಡುವೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಶಾಲೆಯ ವಿದ್ಯಾರ್ಥಿಗಳಿಗೆ ಹಾಗೂ ಹಳೇ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಜಿಲ್ಲಾ ಧಾರ್ಮಿಕ ಪರಿಷತ್ ಅಧ್ಯಕ್ಷ ಜಗನ್ನಾಥ ಚೌಟ, ಕೃಷಿಕ ಜ್ಯೋತಿಂದ್ರ ಶೆಟ್ಟಿ ಮುಂಡಾಜೆಗುತ್ತು, ವಕೀಲ ಶಿವಶಂಕರ ರಾವ್,ನವೀನ್ ಚಂದ್ರ ಶೆಟ್ಟಿ ಮುಂಡಾಜೆ, ನಿವೃತ್ತ ಬ್ಯಾಂಕ್ ಅಧಿಕಾರಿ ಲಕ್ಷ್ಮಿ ಕಾಂತ್ ನಾಯಕ್ ಕೊಡ್ಮಾಣ್,ಉದ್ಯಮಿ ರಮಾನಂದ ಶೆಟ್ಟಿ ಬೆಂಜನಪದವು, ವಿಜಯಲಕ್ಷ್ಮಿ ಆರ್ ಶೆಟ್ಟಿ,ಸಂಸ್ಕಾರ ಭಾರತೀ ಜಿಲ್ಲಾಧ್ಯಕ್ಷ ತಾರಾನಾಥ ಕೊಟ್ಟಾರಿ ತೇವು, ನವೋದಯ ಮಿತ್ರ ಕಲಾ ವೃಂದ ಗೌರವಾಧ್ಯಕ್ಷ ಸುಬ್ರಮಣ್ಯ ರಾವ್, ಅಧ್ಯಕ್ಷ ಜಗದೀಶ ಎನ್, ಕಾರ್ಯದರ್ಶಿ ಮಹೇಶ್ ಎನ್,ಮಾಜಿ ಅಧ್ಯಕ್ಷರಾದ ಸುರೇಶ ಭಂಡಾರಿ ಅರ್ಬಿ, ಸಂತೋಷ್ ಕುಮಾರ್,ಎಸ್ ಡಿ ಎಂ ಸಿ ಉಪಾಧ್ಯಕ್ಷೆ ಸೌಮ್ಯ ಜಗದೀಶ್ ಮತ್ತಿತರರು ಉಪಸ್ಥಿತರಿದ್ದರು.

ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ದಾಮೋದರ ನೆತ್ತರಕೆರೆ ಪ್ರಾಸ್ತವಿಕವಾಗಿ ಮಾತನಾಡಿ ಸ್ವಾಗತಿಸಿದರು, ಶಾಲಾ ಮುಖ್ಯ ಶಿಕ್ಷಕಿ ಸಿಲ್ವಿಯಾ ಬ್ರಿಗ್ಸ್ ವರದಿ ವಾಚಿಸಿದರು, ಶಿಕ್ಷಕಿ ಜೆಸಿಂತಾ ಧನ್ಯವಾದವಿತ್ತು, ಶಿಕ್ಷಕಿ ಮೋಹಿನಿ ಹಾಗೂ ಅವಿನಾಶ್ ಕಾರ್ಯಕ್ರಮ ನಿರೂಪಿಸಿದರು.

ಶಿಕ್ಷಕಿಯರಾದ ಬಾನುಮತಿ, ಸಲೀನಾ, ಆಶಿಕಾ, ಚೇತನ,ನಿಶಾ, ವರ್ಷ, ಶಿಕ್ಷಕ ಹನಮಂತ ಸಹಕರಿಸಿದರು. ಸಂಜೆ ವಿದ್ಯಾರ್ಥಿಗಳಿಂದ ಆಕರ್ಷಕ ಕವಾಯತು, ಸಾಹಸ ಪ್ರದರ್ಶನ ನಡೆಯಿತು, ಬಳಿಕ ಶಾಲಾ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.