ಸವಣೂರು, 4 ಡಿಸೆಂಬರ್ 2025: ಸರಕಾರಿ ಪದವಿ ಪೂರ್ವ ಕಾಲೇಜು ಸವಣೂರು ಪ್ರತಿಭಾ ದಿನಾಚರಣೆಯಾ ಕಾರ್ಯಕ್ರಮವನ್ನು ಶ್ರೀ ಸೂರ್ಯನಾರಾಯಣ ಇವರು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷರಾಗಿ ಗಿರಶಂಕರ್ ಸುಲಯಿಯವರು ಉಪಸ್ಥಿತರಿದ್ದರು. ಮುಖ್ಯ ಅತಿಥಿಗಳಾಗಿಸವಣೂರು ಗ್ರಾಮ ಪಂಚಾಯತಿಯ ಸುಂದರಿ ಹಾಗೂ ಸದಸ್ಯರು ಭಾಗಿಯಾಗಿದರು.
ಸರಕಾರಿ ಪ್ರಾಢಶಾಲೆಯ ಮುಖ್ಯ ಗುರುಗಳಾದ ರೀನಾ ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರದ ಪದ್ಮಾವತಿ ಉಪಸ್ಥಿತರಿದ್ದರು. ನಂತರ ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ದತ್ತು ನಿಧಿ ವಿತರಣೆ ಮಾಡಲಾಯಿತು.
ಮದ್ಯಾಹ್ನ ದ ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರೆವೇರಿಸಿದರು. ಕೊನೆಗೆ ಧನ್ಯವಾದ ಕಾರ್ಯಕ್ರಮವನ್ನು ದೈಹಿಕ ಶಿಕ್ಷಕರಾದ ಮಾಮಚನ್ ಇವರು ನೆರೆವೇರಿಸಿದರು.