ಮೂಡ್ಲಕಟ್ಟೆ, 28 ಅಕ್ಟೋಬರ್ 2024: ಐಎಂಜೆ ವಿಜ್ಞಾನ ಮತ್ತು ವಾಣಿಜ್ಯ ಸಂಸ್ಥೆಯಲ್ಲಿ ಫೈನ್ ಆರ್ಟ್ಸ್ ಅಸೋಸಿಯೇಷನ್ ಅಡಿಯಲ್ಲಿ ಪರಿಸರ ಸ್ನೇಹಿ ಗೂಡು ದೀಪ ರಚನಾ ಸ್ಪರ್ಧೆ ‘ದೀಪಶಿಲ್ಪಂ’ ವನ್ನು ದಿನಾಂಕ 28 ಅಕ್ಟೋಬರ್ 2024 ರಂದು ಮಧ್ಯಾಹ್ನ 3:00 ಗಂಟೆಗೆ ಹಮ್ಮಿಕೊಳ್ಳಲಾಗಿತ್ತು.
9 ತಂಡಗಳು ಇದರಲ್ಲಿ ಭಾಗವಹಿಸಿದ್ದರು. ಪ್ರಥಮ ಬಹುಮಾನವನ್ನು ತೃತೀಯ ಬಿಸಿಎ ವಿದ್ಯಾರ್ಥಿನಿ ಕುಮಾರಿ ದೀಪ ಮತ್ತು ತಂಡ ಪಡೆದರೆ ದ್ವಿತೀಯ ಬಹುಮಾನವನ್ನು ಪ್ರಥಮ ಬಿಸಿಎ ವಿದ್ಯಾರ್ಥಿನಿ ಕುಮಾರಿ ಸಂತೃಪ್ತಿ ಮತ್ತು ತಂಡ ಪಡೆದುಕೊಂಡರು. ಈ ಕಾರ್ಯಕ್ರಮವನ್ನು ಫೈನ್ ಆರ್ಟ್ಸ್ ಅಸೋಸಿಯೇಷನ್ ಸಂಯೋಜಕರಾದ ವಾಣಿಜ್ಯಶಾಸ್ತ್ರ ಉಪನ್ಯಾಸಕಿಯರಾದ ಕುಮಾರಿ ನಿಧಿ ಹಾಗೂ ಗಣಿತ ಶಾಸ್ತ್ರ ಉಪನ್ಯಾಸಕಿಯಾದ ಕು. ರಕ್ಷಿತಾ ಆರ್ ಅಡಿಗ ಆಯೋಜಿಸಿದ್ದರು.