ಉಜಿರೆ, ಒಕ್ಟೋಬರ್ 02, 2024: ಶ್ರೀ ಧ.ಮಂ ಅನುದಾನಿತ ಸೆಕೆಂಡರಿ ಶಾಲೆ ಉಜಿರೆ ಶಾಲೆಯಲ್ಲಿ ರೋಟರಿ ಇಂರ‍್ಯಾಕ್ಟ್ ಕ್ಲಬ್ ನ ಸಹಯೋಯೋಗದಲ್ಲಿ ಅಯೋಜಿಸಿರುವ ಗಾಂಧಿ ಜಯಂತಿ ಆಚರಣೆ ನಡೆಯಿತು. ಮುಖ್ಯ ಅತಿಥಿಗಳು ಸಂದೇಶ ಕುಮಾರ್ ರಾವ್,ಕೃಷಿಕರು ಮತ್ತು ಉದ್ಯಮಿ,ಬೆಳ್ತಂಗಡಿ ಇವರು ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹುದ್ದೂರ್ ಅವರ ಜನ್ಮದಿನಾಚರಣೆಯ ಬಗ್ಗೆ ವಿದ್ಯಾರ್ಥಿಗಳಿಗೆ ಅಹಿಂಸಾ ತತ್ವ ಅಸºಕರ ಚಳುವಳಿ ಉಪ್ಪಿ÷್ಪನ ಸತ್ವಾಗ್ರಹ ಅದೇ ರೀತಿ ರೋಟರಿ ಇಂರ‍್ಯಾಕ್ಟ್ ಕ್ಲಬ್‌ನ ಮಹತ್ವ ಇವುಗಳ ಬಗ್ಗೆ ತಿಳಿಸಿದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿರುವ ಮುಖ್ಯೋಪಾಧ್ಯಾಯರಾದ ಶ್ರೀ ಕೆ.ಸುರೇಶ್ ರವರು ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹುದ್ದೂರ್ ಇವರ ಚಳುವಳಿ ಹೋರಾಟದ ಬಗ್ಗೆ ತಿಳಿಸಿದರು

ವಿದ್ಯಾರ್ಥಿಗಳಿಂದ ಕುಣಿತ ಭಜನೆ , ನೃತ್ಯ , ದೇ಼ಶ ಭಕ್ತಿ ಗೀತೆ, ಭಾಷಣ ಮಾಡಿದರು
ಶಿಕ್ಷಕರೆಲ್ಲರೂ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹುದ್ದೂರ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚಣೆ ಮಾಡಿದರು.
9ನೇ ತರಗತಿಯ ವಿದ್ಯಾರ್ಥಿನಿಯರು ಪ್ರಾರ್ಥನೆ ಮಾಡಿದರು. ವಿದ್ಯಾರ್ಥಿಗಳಾದ ನಿಶಿತ್ 9ನೇ ತರಗತಿ ಗಾಂಧಿ ಜೀವನ ಶೈಲಿಯ ಬಗ್ಗೆ ತಿಳಿಸಿದರು.ಶ್ವೇತಾ 8ನೇ ತರಗತಿ ಇಂರ‍್ಯಾಕ್ಟ್ ಕ್ಲಬ್‌ನ ಮಹತ್ವಗಳ ಬಗ್ಗೆ ತಿಳಿಸಿದರು, ಶೌರ್ಯ 10ನೇ ತರಗತಿ ಅತಿಥಿಗಳ ಪರಿಚಯ ಮಾಡಿದರು.
ಸಫಾ 8ನೇತರಗತಿ ಸ್ವಾಗತಿಸಿದರು. ಶಾಂಭವಿ 9ನೇ ತರಗತಿ ಧನ್ಯವಾದ ಸಮರ್ಪಿಸಿದರು. ತುಳಸಿ ಮತ್ತು ಸಾಝ್ಮಿ 10ನೇ ತರಗತಿ ಕಾರ್ಯಕ್ರಮ ನಿರೂಪಿಸಿದರು.