ಎಡಪದವು, 06 ಸೆಪ್ಟೆಂಬರ್ 2025: ಸ್ವಾಮಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ಮಾದಕ ದ್ರವ್ಯ ಮತ್ತು ಮಾನಸಿಕ ಆರೋಗ್ಯ ಕಾರ್ಯಕ್ರಮವನ್ನು ನಡೆಸಲಾಯಿತು. ಕಾರ್ಯಕ್ರಮವು 12.00 ಗಂಟೆಗೆ ಪ್ರಾರಂಭಗೊಂಡಿತು. ಈ ಕಾರ್ಯಕ್ರಮವನ್ನು ಆಳ್ವಾಸ್ ಕಾಲೇಜಿನ ಸಮಾಜಕಾರ್ಯ ವಿಭಾಗದ ವಿದ್ಯಾರ್ಥಿಗಳು ಸ್ಫಟಿಕ ಪೋರಮ್ ವತಿಯಿಂದ ನಡೆಸಿಕೊಟ್ಟಿದ್ದಾರೆ.
ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿರುವ, ಶ್ರೀಯುತ ಲೋಹಿತ್.ಕೆ ಮುಖ್ಯ ಆಪ್ತಾ ಸಮಲೋಚಕರು ಆಳ್ವಾಸ್ ಪುನರ್ಜನ್ಮ ಮಿಜಾರು, ವಿದ್ಯಾರ್ಥಿಗಳಿಗೆ ಮಾದಕ ದ್ರವ್ಯ ಸೇವಿಸುವುದರಿಂದ ಯಾವ ರೀತಿಯಾಗಿ ಸಮಸ್ಯೆಗಳು ಬರುತ್ತವೆ, ಆರೋಗ್ಯಕ್ಕೆ ಯಾವ ರೀತಿ ಪರಿಣಾಮ ಬೀರುತ್ತದೆ, ಮಾನಸಿಕವಾಗಿ ಯಾವ ರೀತಿಯಾಗಿ ಅವರ ಮೇಲೆ ಪರಿಣಾಮ ಬೀರುತ್ತದೆ ಎಂದು ವಿವರಣೆಯಾಗಿ ತಿಳಿಸಿದರು.
ಹಾಗೆಯೇ ಈ ಕಾರ್ಯಕ್ರಮದಲ್ಲಿ ನಿರೂಪಣೆಯನ್ನು ಅನನ್ಯ ರವರು, ಮತ್ತು ಪ್ರಾರ್ಥನೆಯನ್ನು ಸ್ವಾಮಿ ವಿವೇಕಾನಂದ ಪ. ಪೂ. ಕಾಲೇಜಿನ ವಿದ್ಯಾರ್ಥಿಗಳು ನೆರವೇರಿಸಿದರು. ಸ್ವಾಗತವನ್ನು ಸ್ಪೂರ್ತಿಕಾ ರವರು, ಅತಿಥಿ ಪರಿಚಯವನ್ನು ಸಿನಾನ್ ರವರು ಮತ್ತು ಧನ್ಯವಾದವನ್ನು ಲಿಜೇಶ್ ರವರು ನೆರವೇರಿಸಿದರು. ಈ ಕಾಲೇಜಿನ ಎಲ್ಲಾ ಉಪನ್ಯಾಸಕರು ಮತ್ತು ಉಪನ್ಯಾಸಕಿಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಗಾಯತ್ರಿ ಅವರ ಸಹಕಾರದೊಂದಿಗೆ ಈ ಕಾರ್ಯಕ್ರಮವನ್ನು ನಡೆಸಲಾಯಿತು.