ಎಡಪದವು ,11 ಸೆಪ್ಟೆಂಬರ್ 2025: ಕರ್ನಾಟಕ ಸರ್ಕಾರ ಶಾಲಾ ಶಿಕ್ಷಣ ಇಲಾಖೆ ಪದವಿ ಪೂರ್ವ ಕಾಲೇಜು ದಕ್ಷಿಣ ಕನ್ನಡ ಜಿಲ್ಲೆ ಸ್ವಾಮಿ ವಿವೇಕಾನಂದ ಪದವಿ ಪೂರ್ವ ಕಾಲೇಜು ಎಡಪದವು, ತಾಲೂಕು ಮಟ್ಟದ ಥ್ರೋ ಬಾಲ್ ಪಂದ್ಯಾಟ ಮತ್ತು ಜಿಲ್ಲಾ ಮಟ್ಟದ ನೆಟ್ಬಾಲ್ ಪಂದ್ಯಾವಳಿ ನಡೆಯಿತು

ಉದ್ಘಾಟರಾಗಿ ಶ್ರೀ ಜಗನ್ನಾಥ ಶೆಟ್ಟಿ ದೇವಿ ದಯಾಲ್, ರಾಷ್ಟ್ರೀಯ ಮಟ್ಟದ ಕ್ರೀಡಾ ಪಟುವಗಿದ್ದ ಶ್ರೀಯುತ ರವಿರಾಜ್ ಮತ್ತು ಶ್ರೀಯುತ ವಸಂತ್, ನಮ್ಮ ಕಾಲೇಜಿನ ಪ್ರಾಂಶುಪಾಲಾರದ ಶ್ರೀಮತಿ ಗಾಯತ್ರಿ, ಆಡಳಿತ ಅಧಿಕಾರಿ ಮತ್ತು ದೈಹಿಕ ಶಿಕ್ಷಣ ಉಪನ್ಯಾಸಕರಾಗಿರುವ ಶ್ರೀಯುತ ಪ್ರೇಮಾನಾಥ ಶೆಟ್ಟಿ ನಮ್ಮ ಹೈಸ್ಕೂಲ್ ಮುಕ್ಯೋಪಾಧ್ಯಾಯರು ಶ್ರೀಯುತ ವಾಸು. ಕೆ ಅವರು ಉಪಸ್ಥಿತರಿದ್ದರು.

ನೆಟ್ಬಾಲ್ ಪಂದ್ಯಾವಳಿಯಲ್ಲಿ ಬಾಲಕರ ತಂಡ ಕ್ರಮವಾಗಿ ಸ್ವಾಮಿ ವಿವೇಕಾನಂದ ಪದವಿಪೂರ್ವ ಕಾಲೇಜ್ ಎಡಪದವು ಪ್ರಥಮ, ಜೈನ್ ಪದವಿಪೂರ್ವ ಕಾಲೇಜ್ ಮೂಡಬಿದ್ರಿ, S. D. M ಪದವಿ ಪೂರ್ವ ಕಾಲೇಜ್ ಉಜಿರೆ, ತೃತೀಯ ಸ್ಥಾನವನ್ನು ಪಡೆದಿದ್ದಾರೆ. ಬಾಲಕಿಯರ ತಂಡದಲ್ಲಿ ಕ್ರಮವಾಗಿ ಸ್ವಾಮಿ ವಿವೇಕಾನಂದ ಪದವಿಪೂರ್ವ ಕಾಲೇಜು ಪ್ರಥಮ,S. D. M ಪದವಿಪೂರ್ವ ಕಾಲೇಜ್ ದ್ವಿತೀಯ ಸ್ಥಾನ, ಜೈನ ಪದವಿ ಪೂರ್ವ ಕಾಲೇಜು ಮೂಡಬಿದ್ರಿ ತೃತೀಯ ಸ್ಥಾನ ಗಳಿಸಿರುತ್ತಾರೆ.

ಕಾರ್ಯಕ್ರಮ ವನ್ನು ಶ್ರೀಯುತ ಶಾಂತರಾಮ್ ರೈ ಇವರು ನಿರೂಪಿಸಿದರು. ಶ್ರೀಮತಿ ಗಾಯತ್ರಿ ಇವರು ಸ್ವಾಗತಿಸಿದರು. ಶ್ರೀಮತಿ ಅಮೃತಾ ವಂದನಾರ್ಪಣೆ ಮಾಡಿದರು.