ಶ್ರೀ ದುರ್ಗಾಂಬಾ ಪದವಿ ಪೂರ್ವ ಕಾಲೇಜು ಆಲಂಕಾರು ವಾರ್ಷಿಕ ಪರೀಕ್ಷೆಯಲ್ಲಿ ಕಲಾ ಮತ್ತು ವಾಣಿಜ್ಯ ವಿಭಾಗದಲ್ಲಿ ಶೇಕಡ 100 ಫಲಿತಾಂಶ ದಾಖಲಿಸಿದೆ. ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಒಟ್ಟು 34 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಅದರಲ್ಲಿ ವಾಣಿಜ್ಯ ವಿಭಾಗದಲ್ಲಿ ತೃಪ್ತಿ- 561, ವರ್ಷ- 548, ಸಂಧ್ಯಾ -542, ಆಶಾಲತಾ -531, ದೀಕ್ಷಾ – 529, ರೂಪಿಕ – 512, ಪ್ರತಿಕ್ಷಾ-512, ಹರ್ಷಿತಾ – 510 ಹಾಗೂ ಕಲಾ ವಿಭಾಗದಲ್ಲಿ ಪ್ರಿಯ ಶ್ರೀ – 552, ಧನ್ಯಶ್ರೀ – 545 ಅನಘಲಕ್ಷ್ಮಿ – 522 ಅಂಕ ಪಡೆದು ವಿಶಿಷ್ಟತಾ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ. ಹಾಗೂ ವಾಣಿಜ್ಯ ವಿಭಾಗದಲ್ಲಿ 06 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ . ಕಲಾ ವಿಭಾಗದಲ್ಲಿ 15 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಇಬ್ಬರು ವಿದ್ಯಾರ್ಥಿ ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣನಾಗಿರುತ್ತಾನೆ.
ಉತ್ತಮ ಫಲಿತಾಂಶ ದಾಖಲಿಸುವಲ್ಲಿ ಮಾರ್ಗದರ್ಶನ ನೀಡಿದ ಆಡಳಿತ ಮಂಡಳಿ ಅಧ್ಯಕ್ಷರಾದ ಶ್ರೀ ದಯಾನಂದ ರೈ ಮನವಳಿಕೆ, ಕಾರ್ಯದರ್ಶಿಗಳಾದ ಈಶ್ವರ ಗೌಡ ಪಜ್ಜಡ್ಕ, ಆಡಳಿತ ಮಂಡಳಿಯ ಎಲ್ಲಾ ಕಾರ್ಯಕಾರಿ ಸಮಿತಿಯ ಸದಸ್ಯರು, ಆಡಳಿತಾಧಿಕಾರಿಗಳಾದ ಶ್ರೀಪತಿ ರಾವ್ ಎಚ್ ಮುಖ್ಯಗುರುಗಳಾದ ನವೀನ್ ರೈ ಹಾಗೂ ಉತ್ತಮ ಫಲಿತಾಂಶ ಪಡೆಯಲು ಶ್ರಮಿಸಿದ ಎಲ್ಲಾ ಉಪನ್ಯಾಸಕ ವೃಂದದವರಿಗೆ, ಹಾಗೂ ಸಂಸ್ಥೆಯ ಎಲ್ಲಾ ಬೋಧಕ ಬೋಧಕೇತರ ವೃಂದದವರಿಗೆ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀನಾಥ್ ಗೌಡ ಕೇವಳ ಹಾಗೂ ಸರ್ವ ಸದಸ್ಯರಿಗೆ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಸುಂದರ ಗೌಡ ನೋಟರಿ ವಕೀಲರು ಹಾಗೂ ಎಲ್ಲಾ ಸದಸ್ಯರಿಗೆ ಪ್ರಾಂಶುಪಾಲರಾದ ರೂಪ ಜೆ ರೈ ಅವರು ಧನ್ಯವಾದ ಸಮರ್ಪಿಸಿದರು. ಹಾಗೂ ಉತ್ತಮ ಫಲಿತಾಂಶ ದಾಖಲಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.