ಮಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಶಾಲಾ ಇಲಾಖೆ (ಪದವಿ ಪೂರ್ವ)ದ.ಕ ಜಿಲ್ಲೆ ಮಂಗಳೂರು, ಶ್ರೀ ರಾಮ ಕೃಷ್ಣ ಪದವಿ ಪೂರ್ವ ಕಾಲೇಜು, ಬಂಟ್ಸ್ ಹಾಸ್ಟೆಲ್ ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ‘ಸುವರ್ಣ ಕರ್ನಾಟಕ ಸಂಭ್ರಮ 50’ ಹೆಸರಾಯಿತು ‘ಕರ್ನಾಟಕ, ಉಸಿರಾಗಲಿ ಕನ್ನಡ ಶೀರ್ಷಿಕೆಯಡಿಯಲ್ಲಿ ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆ ಕಾಲೇಜಿನ ಸಭಾಂಗಣದಲ್ಲಿ ಜರುಗಿತು.

ಕಾರ್ಯಕ್ರಮವನ್ನು ಮೂಲ್ಕಿ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವಾಸುದೇವ ಬೆಳ್ಳಿ ಉದ್ಘಾಟಿಸಿ ಅವರು ಮಾತನಾಡಿ, ಕರ್ನಾಟಕ ಎನ್ನುದು ಬಹು ಸಂಸ್ಕೃತಿಯುಳ್ಳ ರಾಜ್ಯ. ಕನ್ನಡ ಭಾಷೆ ನಮ್ಮ ಉಸಿರಾಗಬೇಕು ಎಂದರು. ಕನ್ನಡ ಅನ್ನುವುದು ಬರೇ ಭಾಷೆ ಅಲ್ಲ, ಕನ್ನಡ ಅನ್ನುವುದು ಸಮಾಜ. ಕರ್ನಾಟಕ ಎಂಬ ಹೆಸರಾಗಿ 50 ವರ್ಷವಾಗಿದೆ. ಆ ನಿಟ್ಟಿನಲ್ಲಿ ಸರ್ಕಾರವು ವಿದ್ಯಾರ್ಥಿಗಳಲ್ಲಿ ಭಾಷೆಯ ಅಭಿಮಾನವನ್ನು ಮೂಡಿಸುವವುದಕ್ಕಾಗಿ, ಕನ್ನಡವನ್ನು ಹೇಗೆ ಉಳಿಸಿ ಬೆಳೆಸಬಹುದು, ಕರ್ನಾಟಕಕ್ಕೆ ನಮ್ಮ ಕರಾವಳಿಯ ಏನು ಎನ್ನುದರ ಬಗ್ಗೆ ವಿದ್ಯಾರ್ಥಿಗಳು ತಿಳಿಕೊಳ್ಳಬೇಕು ಎನ್ನುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಮಕೃಷ್ಣ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಯಶೋಧ ಯು. ಶೆಟ್ಟಿ ವಹಿದ್ದರು. ಕಾಲೇಜಿನ ಉಪ ಪ್ರಾಂಶುಪಾಲ ಧನರಾಜ್ ಚಿಪ್ಪಾರ್, ಹಿರಿಯ ಕನ್ನಡ ಉಪನ್ಯಾಸಕಿ ರುಕ್ಕಿಣಿ, ರಾಮಕೃಷ್ಣ ಹೈಸ್ಕೂಲ್ ಉಪ ಪ್ರಾಂಶುಪಾಲೆ ರೂಪ, ಪದವಿ ಕಾಲೇಜಿನ ಉಪನ್ಯಾಸಕ ನಟೇಶ್ ಆಳ್ವ ಮತ್ತಿರರು ಉಪಸ್ಥಿತರಿದ್ದರು.
ಸ್ಪರ್ಧೆಯಲ್ಲಿ 9 ತಾಲೂಕಿನ ವಿಜೇತ 27 ಸ್ಪರ್ಧಾಳುಗಳು ಭಾಗವಹಿಸಿದ್ದರು.
ಉಪನ್ಯಾಸಕರುಗಳಾದ ರುಕ್ಕಿಣಿ ನಟೇಶ್ ಆಳ್ವ, ರೂಪ ತೀರ್ಪುಗಾರಾಗಿ ಭಾಗವಹಿಸಿದ್ದರು.