ಮಂಗಳೂರು, 11 ಅಕ್ಟೋಬರ್ 2024: ಕೆನರಾ ಶಿಕ್ಷಣ ಸಂಸ್ಥೆಯ ಒಂದು ಭಾಗವಾದ ಕೆನರ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ವಾರ್ಷೀಕೋತ್ಸವದ ಸಲುವಾಗಿ ಕನ್ನಡ ಮಾಧ್ಯಮದ 1 ರಿಂದ 5ನೇ ತರಗತಿಯ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು. ಸುಮಾರು ಹತ್ತು ಶಾಲೆಯಿಂದ 80ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆನರಾ ಸಿ.ಬಿ.ಎಸ್.ಸಿ ಶಾಲೆಯ ವ್ಯವಸ್ಥಾಪಕರಾದ ಅಶ್ವಿನಿ ಕಾಮತ್ ವಹಿಸಿದ್ದರು, ಕೆನರಾ ಕಾಲೇಜಿನ ಆಡಳಿತಾಧಿಕಾರಿ ಡಾಕ್ಟರ್ ದೀಪ್ತಿ ಯವರು ಮತ್ತು ಮುಖ್ಯ ಶಿಕ್ಷಕಿ ಪ್ರಮೀಳಾ ಸಲ್ಡಾನ ಉಪಸ್ಥಿತರಿದ್ದರು.