ಮೂಡಬಿದರೆ, ಅಕ್ಟೋಬರ್ 01, 2024: ಶಾಲಾ ಶಿಕ್ಷಣ ಇಲಾಖೆ (ಪಿ.ಯು) ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ಮತ್ತು ಶ್ರೀ ನಾರಾಯಣಗುರು ಸಂಯುಕ್ತ ಪಿ.ಯು ಕಾಲೇಜು ಮುಲ್ಕಿ ಇವರ ಸಹಯೋಗದೊಂದಿಗೆ ತಾಲೂಕು ಮಟ್ಟದ ಅಥ್ಲೆಟಿಕ್ ಪಂದ್ಯಾಟವು ಮೂಡಬಿದರೆಯ ಸ್ವರಾಜ್ ಮೈದಾನದಲ್ಲಿ ನಡೆಯಿತು.

ಎಡಪದವಿನ ಸ್ವಾಮಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಸುಮಾರು 35 ವಿದ್ಯಾರ್ಥಿಗಳು ಈ ಪಂದ್ಯಾಟದಲ್ಲಿ ಭಾಗವಹಿಸಿದರು. ಅತ್ಯುತ್ತಮ ಪ್ರದರ್ಶನ ನೀಡಿ ಪ್ರಥಮ, ದ್ವಿತೀಯ ಮತ್ತು ತ್ರಿತೀಯ ಸ್ಥಾನಗಳನ್ನು ಗಳಿಸಿ ಚಿನ್ನ, ಬೆಳ್ಳಿ, ಕಂಚು ಪದಕಗಳನ್ನು ಗೆದ್ದು ವಿಜೇತರಾಗಿದ್ದಾರೆ. ಇದರ ಫಲಸ್ವರೂಪವಾಗಿ ಬಾಲಕ ಮತ್ತು ಬಾಲಕಿಯರ ತಂಡವು ಚಾಂಪಿಯನ್ ಶಿಪ್ ಗಳಿಸಿತು. ಹಾಗು ಬಾಲಕರ ವಯಕ್ತಿಕ ಚಾಂಪಿಯನ್ ಶಿಪ್ ನ್ನು ರಂಗಣ್ಣ ಪಡೆದಿದ್ದು ಮುಂದಿನ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ಈ ವಿದ್ಯಾರ್ಥಿಗಳ ಸಾಧನೆಗೆ ದೈಹಿಕ ಉಪನ್ಯಾಸಕರಾದ ಶ್ರೀಯುತ ಪ್ರೇಮನಾಥ್ ಶೆಟ್ಟಿ ತರಬೇತಿ ನೀಡ್ದಿದ್ದು, ಕಾಲೇಜಿನ ಪ್ರಾಚಾರ್ಯರಾದ ಶ್ರೀಮತಿ ಗಾಯತ್ರಿ ಹಾಗೂ ಉಪನ್ಯಾಸಕ ವೃಂದದವರು ಮೆಚ್ಚುಗೆ ವ್ಯಕ್ತಪಡಿಸಿರುತ್ತಾರೆ.