ಮೂಡ್ಲಕಟ್ಟೆ, 12 ಮೇ 2025: ಐಎಂಜೆ ವಿಜ್ಞಾನ ಮತ್ತು ವಾಣಿಜ್ಯ ಸಂಸ್ಥೆಯಲ್ಲಿ ಟ್ರೈನಿಂಗ್ ಅಂಡ್ ಪ್ಲೇಸ್ಮೆಂಟ್ ವಿಭಾಗವು ಮ್ಯಾಜಿಕ್ ಬಸ್ ಫೌಂಡೇಶನ್ ನ ಸಹಕಾರದೊಂದಿಗೆ ಕ್ಯಾಂಪಸ್ ಸಂದರ್ಶನ ಹಮ್ಮಿಕೊಂಡಿತ್ತು. ಬೆಂಗಳೂರಿನ ಬ್ಲೂವರ್ಸ್ ಸಿಸ್ಟಮ್ಸ್ ಮತ್ತು ಮುತ್ತೂಟ್ ಫೈನಾನ್ಸ್ ಕಂಪನಿಗಳು ಭಾಗವಹಿಸಿದ್ದವು. ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬ್ಲೂವರ್ಸ್ ಸಿಸ್ಟಮ್ಸ್ ನ HR ಮ್ಯಾನೇಜರ್ ಶ್ರೀ ಸಂತೋಷ ಹಾಗು ಮುತ್ತೂಟ್ ಫೈನಾನ್ಸ್ ನ HR ಮ್ಯಾನೇಜರ್ ಶ್ರೀ ರಮೇಶ್ ಕೃಷ್ಣ ಅವರು ಅವರು ವಿದ್ಯಾರ್ಥಿಗಳಿಗೆ ಕಂಪನಿಯಲ್ಲಿ ಲಭ್ಯವಿರುವ ಉದ್ಯೋಗವಕಾಶಗಳು, ಆಯ್ಕೆ ಪ್ರಕ್ರಿಯೆ ಮತ್ತು ಇತರ ವಿಷಯಗಳನ್ನು ಹಂಚಿಕೊಂಡರು. ನಂತರ ಎರಡು ಕಂಪನಿಯಿಂದ ಆಯ್ಕೆ ಪ್ರಕ್ರಿಯೆ ನಡೆಯಿತು. ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಬ್ಲೂವರ್ಸ್ ಸಿಸ್ಟಮ್ ಗೆ 33 ವಿದ್ಯಾರ್ಥಿಗಳು ಮತ್ತು ಮುತ್ತೂಟ್ ಫೈನಾನ್ಸ್ ಗೆ 31 ವಿದ್ಯಾರ್ಥಿಗಳು ಅಂತಿಮ ಹಂತಕ್ಕೆ ಆಯ್ಕೆಗೊಂಡರು. ಉದ್ಘಾಟನಾ ಕಾರ್ಯಕ್ರಮದಲ್ಲಿ ಮ್ಯಾಜಿಕ್ ಬಸ್ ಫೌಂಡೇಶನ್ ನ ಪ್ರತಿನಿಧಿಗಳಾದ ಶ್ರೀ ರವಿ ಮತ್ತು ಶ್ರೀ ವೆಂಕಟ್ರಾಯಲು ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಪ್ರತಿಭಾ ಎಂ ಪಟೇಲ್ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಉಪ ಪ್ರಾಂಶುಪಾಲರು ಹಾಗೂ ತರಬೇತಿ ಮತ್ತು ಉದ್ಯೋಗ ಘಟಕದ ಸಂಯೋಜಕರಾದ ಶ್ರೀ ಜಯಶೀಲ್ ಕುಮಾರ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ತರಬೇತಿ ಮತ್ತು ಉದ್ಯೋಗ ಘಟಕದ ಸಹಾಯಕ ಸಂಯೋಜಕರು ಹಾಗೂ ಇಂಗ್ಲೀಷ್ ಉಪನ್ಯಾಸಕಿ ಕು. ರಾಜೇಶ್ವರಿ ಆರ್ ಶೆಟ್ಟಿ ನಿರೂಪಿಸಿದರು.