ಮೂಲ್ಕಿ: ವಿಜಯ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ, ಎನ್‌ಸಿಸಿ, ರೆಡ್ ಕ್ರಾಸ್, ರೋವರ್ ಮತ್ತು ರೇಂಜರ್ಸ್ ಘಟಕಗಳು ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ಪಾಯರ್, ಎಚ್ ಡಿ ಎಫ್ ಸಿ ಬ್ಯಾಂಕ್ ಉಡುಪಿ, ಇವರ ಸಹಯೋಗದೊಂದಿಗೆ ಕೆ.ಎಂ.ಸಿ ಆಸ್ಪತ್ರೆ ಮಣಿಪಾಲ ಇದರ ಸಹಕಾರದೊಂದಿಗೆ ರಕ್ತದಾನ ಶಿಬಿರವನ್ನು ಆಯೋಜಿಸಿದರು.
ಕಾರ್ಯಕ್ರಮದ ಅಧ್ಯಕ್ಷರಾದ ವಿಜಯ ಕಾಲೇಜು, ಮೂಲ್ಕಿ ಇಲ್ಲಿಯ ಪ್ರಾಂಶುಪಾಲರಾದ ಪ್ರೊಫೆಸರ್ ವೆಂಕಟೇಶ್ ಭಟ್ ಇವರು ಮಾತನಾಡಿ, ರಕ್ತದಾನವು ಉತ್ತಮ ಆರೋಗ್ಯಕ್ಕಾಗಿ ನಮ್ಮ ದೇಹವನ್ನು ಪುನರುಜ್ಜೀವನಗೊಳಿಸುತ್ತದೆ. ಮುಂದೆ, ಒಂದೇ ರಕ್ತದಾನವು ಅಗತ್ಯವಿರುವ ಕನಿಷ್ಠ ಮೂರು ಜನರಿಗೆ ಸಹಾಯ ಮಾಡುತ್ತದೆ. ಹೀಗಿರುವಾಗ, ಒಂದು ದೇಣಿಗೆ ಎಷ್ಟು ಜನರ ಜೀವನದಲ್ಲಿ ಬದಲಾವಣೆಯನ್ನು ತರುತ್ತದೆ, ಎಂಬುದನ್ನು ತಿಳಿಸಿದರು.
ಲೈನ್ಸ್ ಕ್ಲಬ್ ಇನ್ಸ್ಪೇರ್ ಬಪ್ಪನಾಡು ಇದರ ಪ್ರಾಂತೀಯ ಅಧ್ಯಕ್ಷರಾದ ಲಯನ್ ವೆಂಕಟೇಶ್ ಹೆಬ್ಬಾರ್ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ, ” ರಕ್ತದಾನ ಮಾಡಲು ಮುಖ್ಯ ಕಾರಣ ಜೀವವನ್ನು ಉಳಿಸುವುದು, ಆದ್ದರಿಂದ ನೀವು ರಕ್ತದಾನ ಮಾಡಲು ಯೋಚಿಸಬಾರದು. ಇದು ಮಾನವೀಯತೆಯ ಸಂಕೇತವಾಗಿದೆ. ಇದು ರಕ್ತದಾನಿಗಳ ಜಾತಿ, ಮತ, ಧರ್ಮವನ್ನು ನೋಡುವುದಿಲ್ಲ.ನಾವು ದಾನ ಮಾಡುವ ರಕ್ತವು ಅಗತ್ಯವಿರುವ ವ್ಯಕ್ತಿಗೆ ಸಹಾಯ ಮಾಡುತ್ತದೆ”. ಎಂದು ಹೇಳಿದರು ಆಸ್ಪತ್ರೆ ಮಣಿಪಾಲ ಇಲ್ಲಿಯ ವೈದ್ಯಾಧಿಕಾರಿಗಳಾದ ಡಾಕ್ಟರ್ ರಂಜಿತಾ ರಾವ್ ಇವರು ಮಾತನಾಡಿ, ರಕ್ತದಾನ ಮಾಡುವುದರಿಂದ ನಮಗೆ ಆಗುವ ಸಹಾಯ ಹಾಗೂ ಅದರ ಪ್ರಯೋಜನಗಳನ್ನು ವಿವರಿಸಿದರು ರಕ್ತದಾನ ಮಾಡುವುದರಿಂದ ನಮ್ಮ ಜೀವವನ್ನು ನಾವು ಸುಧಾರಿಸಿಕೊಳ್ಳಬಹುದು ಹಾಗೆಯೇ ಇತರರಿಗೂ ಸಹಾಯ ಮಾಡಬಹುದು ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾದ ಲೈನ್ಸ್ ಕ್ಲಬ್ ಬಪನಾಡು ಇದರ ಅಧ್ಯಕ್ಷರಾದ ಲಯನ್ ಶಿವಪ್ರಸಾದ್, ಇವರು ಮಾತನಾಡಿ ” ರಕ್ತದಾನ ಮನುಷ್ಯನ ಆರೋಗ್ಯ ಸ್ಥಿತಿಯನ್ನು ಸುಧಾರಿಸುತ್ತದೆ ಮತ್ತು ಅವರ ನಿರ್ಣಾಯಕ ಪರಿಸ್ಥಿತಿಯನ್ನು ಸುಧಾರಿಸುತ್ತದೆ” ಎಂದು ತಿಳಿಸಿದರು. ಹೆಚ್‌ಡಿಎಫ್‌ಸಿ ಬ್ಯಾಂಕ್ ಇದರ ಉಪ ವ್ಯವಸ್ಥಾಪಕರಾದ, ಶ್ರೀ ತಿಲಕ್ ಉಪಸ್ಥಿತರಿದ್ದರು. ಲಯನ್ಸ್ ಕ್ಲಬ್ ಬಪನಾಡು ಇನ್ಸ್ಪೈರ್ ಇದರ ಕಾರ್ಯದರ್ಶಿಯಾದ, ಲಯನ್ ಪ್ರತಿಭಾ ಹೆಬ್ಬಾರ್ ಇವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕುಮಾರಿ ಕಶಿಫ ಇವರು ಕಾರ್ಯಕ್ರಮ ನಿರೂಪಿಸಿದರು, ಮಾಶಿತಾ ಇವರು ಸ್ವಾಗತಿಸಿ ಭೂಮಿಕ ಇವರು ವಂದಿಸಿದರು