ಮಂಗಳೂರು, 27 ಅಕ್ಟೋಬರ್ 2025: ಶಾಲಾ ಶಿಕ್ಷಣ ಇಲಾಖೆ ( ಪದವಿ ಪೂರ್ವ ) ಹಾಗೂ ಬೆಸೆಂಟ್ ರಾಷ್ಟ್ರೀಯ ಪದವಿ ಪೂರ್ವ ಕಾಲೇಜು, ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಬಾಲಕ ಬಾಲಕಿಯರ ಬಾಲ್ ಬ್ಯಾಡ್ಮಿಂಟನ್ ಪಂದ್ಯಕೂಟವು ಸೋಮವಾರದಂದು ಕಾಲೇಜು ಕ್ರೀಡಾಂಗಣದಲ್ಲಿ ನೆರವೇರಿತು . ಈ ಪಂದ್ಯಕೂಟಕ್ಕೆ ಬೆಸೆಂಟ್ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಮಣೇಲ್ ಅಣ್ಣಪ್ಪ ನಾಯಕ್ ಇವರು ಚಾಲನೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಶ್ರೀಮತಿ ರಾಜೇಶ್ವರಿ ಹೆಚ್ ಹೆಚ್ ಉಪನಿರ್ದೇಶಕರು ಪದವಿ ಪೂರ್ವ ಶಿಕ್ಷಣ ಇಲಾಖೆ, ಶ್ರೀ ಸತೀಶ್ ಕುಮಾರ್ ಭಟ್ ಕಾಲೇಜು ಸಂಚಾಲಕರು ಶ್ರೀ ಪ್ರೇಮನಾಥ ಶೆಟ್ಟಿ ಜಿಲ್ಲಾ ಕ್ರೀಡಾ ಸಂಯೋಜಕರು ಶ್ರೀಮತಿ ಕಾತ್ಯಾಯಿನಿ ವಸಂತ ಪ್ರೇಮಿ ಮಂಡಳಿ ಅಧ್ಯಕ್ಷರು ಶ್ರೀ ಪ್ರಶಾಂತ್ ಕೆ ಶಿಕ್ಷಕರಕ್ಷಕ ಸಂಘದ ಅಧ್ಯಕ್ಷರು ಶ್ರೀಮತಿ ಕೃಪಾಕ್ಷಿ ಉಪ ಪ್ರಾಂಶುಪಾಲರು ಶ್ರೀ ಸುಬ್ರಾಯ ಕಾಮತ್ ಕಾಲೇಜಿನ ದೈಹಿಕ ಶಿಕ್ಷಣ ಉಪನ್ಯಾಸಕರು ಉಪಸ್ಥಿತರಿದ್ದರು. ಶ್ರೀಮತಿ ಅಕ್ಷತಾ ಉಪನ್ಯಾಸಕರು ಕಾರ್ಯಕ್ರಮ ನಿರೂಪಿಸಿದವರು ಶ್ರೀಮತಿ ರಾಜಿ ಮೋಲ್ ಉಪನ್ಯಾಸಕರು ಸ್ವಾಗತಿಸಿದರು ಶ್ರೀಮತಿ ಪ್ರಿಯಾ ಪ್ರಭು ಉಪನ್ಯಾಸಕರು ಧನ್ಯವಾದ ಕಾರ್ಯಕ್ರಮ ನಿರೂಪಿಸಿದರು.