ಕುಂದಾಪುರ, 08 ಮಾರ್ಚ್ 2025: ಇಲ್ಲಿನ ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಮಹಿಳಾ ಸಬಲೀಕರಣ ಘಟಕ ಹಾಗೂ ರಾಷ್ಟೀಯ ಸೇವಾ ಯೋಜನಾ ಘಟಕಗಳ ಜಂಟಿ ಆಶ್ರಯದಲ್ಲಿ ಜೆಸಿಐ ಕುಂದಾಪುರ ಸಿಟಿ ಇವರ ಸಹಯೋಗದೊಂದಿಗೆ ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಸಾಧಕ ಮಹಿಳೆಯರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
ಗ್ರಾಮ ಪಂಚಾಯತ್ ವಡ್ಡರ್ಸೆಯ ಸ್ವಚ್ಛವಾಹಿನಿ ಚಾಲಕಿ ಶ್ರೀಮತಿ ದೀಪಾ, ಸ್ವಾವಲಂಬಿ ಬದುಕು ಕಟ್ಟಿಕೊಂಡ ಸಾಧಕಿ ಶ್ರೀಮತಿ ಜ್ಯೋತಿ ಹೊಳ್ಮಗೆ, ಕಾಲೇಜಿನ ಯಕ್ಷಗಾನ ಪ್ರತಿಭೆ ಪೂಜಾ ಆಚಾರ್ ತೆಕ್ಕಟ್ಟೆ, ಸಾಂಸ್ಕೃತಿಕ ಪ್ರತಿಭೆ ಶ್ರದ್ಧಾ ಆರ್. ಹಾಗೂ ಬಹುಮುಖ ಪ್ರತಿಭೆ ಪವಿತ್ರ ಪೈ ಇವರನ್ನು ಸನ್ಮಾನಿಸಲಾಯಿತು
ಕುಂದಾಪುರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ಶ್ರೀಮತಿ ಪುಷ್ಪ ಸಾಧಕೀಯರನ್ನು ಸನ್ಮಾನಿಸಿ, ಶುಭ ಹಾರೈಸಿದರು. ಜೆಸಿಐ ವಲಯ 15ರ ನಿರ್ದೇಶಕಿ ಜೆಸಿ ಜಯಶ್ರೀ ಮುಖ್ಯ ಅತಿಥಿ ನೆಲೆಯ ಮಾತುಗಳನ್ನು ಆಡಿದರು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಕುಂದಾಪುರ ಸಿಟಿ ಜೆಸಿಐ ಅಧ್ಯಕ್ಷ ಜೆಸಿ ಯೂಸುಫ್ ಸಲೀಂ, ಲೇಡಿ ಜೆಸಿಐ ಅಧ್ಯಕ್ಷ ಜೆಸಿ ಶೈಲಾ ಲೂಯಿಸ್, ನಿಕಟ ಪೂರ್ವ ಅಧ್ಯಕ್ಷ ಜೆಸಿ ರಾಘವೇಂದ್ರ ಕುಲಾಲ್ ಹೆಮ್ಮಾಡಿ, ಕಾರ್ಯದರ್ಶಿ ಕಿರಣ್ ದೇವಾಡಿಗ, ಮಾಜಿ ಅಧ್ಯಕ್ಷೆ ಡಾ| ಸೋನಿ, ಮಾಜಿ ಅಧ್ಯಕ್ಷ ವಿಜಯ್ ಭಂಡಾರಿ, ಮಾಜಿ ಲೇಡಿ ಜೆಸಿಐ ಅಧ್ಯಕ್ಷೆ ಜಯಶೀಲ ಪೈ, ಜೂನಿಯರ್ ಜೆಸಿಐ ಅಧ್ಯಕ್ಷ ಸುಮೇದಾ ಮೆಂಡನ್, ಅನಿಲ್ ಪೂಜಾರಿ, ಜೆಜೆಸಿ ಸ್ಫೂರ್ತಿ ಉಪಸ್ಥಿತರಿದ್ದರು.
ಕಾಲೇಜಿನ ಉಪ-ಪ್ರಾಂಶುಪಾಲ, ಎನ.ಎಸ್.ಎಸ್. ಕಾರ್ಯಕ್ರಮ ಅಧಿಕಾರಿ ಡಾ. ಚೇತನ್ ಶೆಟ್ಟಿ ಕೋವಾಡಿ ಸ್ವಾಗತಿಸಿ, ಪ್ರಸ್ತಾವಿಸಿದರು. ಕುಂದಾಪುರ ಸಿಟಿ ಜೆಸಿಐ ಸ್ಥಾಪಕ ಅಧ್ಯಕ್ಷ ಹುಸೇನ್ ಹೈಕಾಡಿ ಆಶಯ ನುಡಿಗಳನ್ನಾಡಿದರು. ಕಾಲೇಜಿನ ಮಹಿಳಾ ಸಬಲೀಕರಣ ಘಟಕದ ಸಂಯೋಜಕಿ ಶ್ರೀಮತಿ ವೀಣಾ ಭಟ್ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಸಹ ಸಂಯೋಜಕಿ ರಶ್ಮಿ ಗಾವಡಿ ವಂದಿಸಿದರು. ಎನ.ಎಸ್.ಎಸ್. ಕಾರ್ಯಕ್ರಮಾ ಅಧಿಕಾರಿ ದೀಪಾ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭ ಮಹಿಳಾ ದಿನಾಚರಣೆ ಪ್ರಯುಕ್ತ ಆಯೋಜಿಸಿದ ಮಹಿಳಾ ಸಾಧಕಿಯರ ಡಾಕ್ಯುಮೆಂಟರಿ, ಭಾಷಣ ಸ್ಪರ್ಧೆ, ರಂಗೋಲಿ ಸ್ಪರ್ಧೆ, ಮಿನಿ ಕ್ರಿಯೇಚರ್ ಹಾಗೂ ರೀಲ್ಸ್ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.