ಕುಂದಾಪುರ, 01 ಮೇ 2025: ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಪ್ರತಿಭಾ ದಿನಾಚರಣೆಯ ಸಮಾರೋಪ ಸಮಾರಂಭದಲ್ಲಿ ತೀರ್ಪುಗಾರರಾದ ಕೋಟ ವಿವೇಕ ಪದವಿ ಪೂರ್ವ ಕಾಲೇಜಿನ ಇಂಗ್ಲೀಷ್ ಉಪನ್ಯಾಸಕ ಶ್ರೀ ಶಿವಪ್ರಸಾದ್ ಶೆಟ್ಟಿಗಾರ್, ವಡ್ಡರ್ಸೆಯ ಸರಕಾರಿ ಪ್ರೌಢ ಶಾಲಾ ಶಿಕ್ಷಕರಾದ ಶ್ರೀ ಆನಂದ ಶೆಟ್ಟಿ ಹಾಗೂ ಶಂಕರನಾರಾಯಣದ ಮದರ್ ತೆರೇಸಾ ಪದವಿ ಪೂರ್ವ ಕಾಲೇಜಿನ ಉಪ-ಪ್ರಾಂಶುಪಾಲರಾದ ಗೀತಾ, ಅನಿಸಿಕೆಯ ಹಂಚಿಕೊಂಡರು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಉಪ-ಪ್ರಾಂಶುಪಾಲರಾದ ಡಾ| ಚೇತನ್ ಶೆಟ್ಟಿ ಕೋವಾಡಿ, ಆಡಳಿತ ನಿಕಾಯಕರು ಶ್ರೀ ರಕ್ಷಿತ್ ರಾವ್ ಗುಜ್ಜಾಡಿ ಹಾಗೂ ಐಕ್ಯೂಎಸಿ ಸಂಯೋಜಕಿ ಶ್ರೀಮತಿ ದೀಪಿಕಾ ಜಿ. ಉಪಸ್ಥಿತರಿದ್ದರು.
ಕಾಲೇಜಿನ ಕನ್ನಡ ಪ್ರಾಧ್ಯಾಪಕ ಶ್ರೀ ಸುಕುಮಾರ್ ಶೆಟ್ಟಿ ಬಹುಮಾನಿತರ ಪಟ್ಟಿ ವಾಚಿಸಿದರು. ವಾಣಿಜ್ಯ ಪ್ರಾಧ್ಯಾಪಕಿ ದೀಪಾ ಪೂಜಾರಿ ನಿರೂಪಿಸಿ, ವಂದಿಸಿದರು. ಈ ಸಂದರ್ಭ ಬಹುಮಾನ ವಿತರಣೆ ನಡೆಸಲಾಯಿತು. ಅತ್ಯುತ್ತಮ ನಿರೂಪಣೆ ನಿಖಿತಾ, ತೃತೀಯ ಬಿ.ಕಾಂ. (ಬಿ), ಅತ್ಯುತ್ತಮ ಗುಂಪು ನೃತ್ಯ ಬಹುಮಾನ ದ್ವಿತೀಯ ಬಿ.ಕಾಂ. (ಸಿ), ವೈಯಕ್ತಿಕ ಪ್ರತಿಭೆ – ಕಿರಣ್ ಕುಮಾರ್ ಎನ್., ತೃತೀಯ ಬಿಬಿಎ ಒಟ್ಟು ಸಮಗ್ರ ಪುರಸ್ಕಾರವನ್ನು ಕ್ರಮವಾಗಿ ತೃತೀಯ ಬಿ.ಕಾಂ. (ಎ), ತೃತೀಯ ಬಿಬಿಎ, ಪ್ರಥಮ ಬಿ.ಕಾಂ. (ಬಿ) ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನವನ್ನು ಪಡೆದರು.