ಬ್ರಹ್ಮಾವರ, 6 ಫೆಬ್ರವರಿ 2025: ಇಲ್ಲಿನ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನ ವಡ್ಡರ್ಸೆಯಲ್ಲಿ ಕುಂದಾಪುರದ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ರಾಷ್ಟೀಯ ಸೇವಾ ಯೋಜನಾ ಘಟಕಗಳ 2024-25ನೇ ಶೈಕ್ಷಣಿಕ ಸಾಲಿನ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನಾ ಕಾರ್ಯಕ್ರಮ ನಡೆಯಿತು.
ಇಂತಹ ಎನ್.ಎಸ್.ಎಸ್. ಶಿಬಿರಗಳಲ್ಲಿ ಭಾಗವಹಿಸುವ ಮೂಲಕ ವಿದ್ಯಾರ್ಥಿಗಳು ಬದುಕಿನಲ್ಲಿ ಶಿಸ್ತು, ಸಮಯ ಪಾಲನೆ, ನೈತಿಕ ಮೌಲ್ಯಗಳನ್ನು ರೂಡಿಸಿಕೊಳ್ಳಲು ಸಾಧ್ಯ. ಇಂತಹ ಶಿಬಿರಗಳು ವರ್ಷದಲ್ಲಿ ಒಂದು ಬಾರಿ ಅಲ್ಲ ನಿರಂತರವಾಗಿ ನಡೆಯಬೇಕು. ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಇದು ದಾರಿಯಾಗಬಲ್ಲದು, ಜೊತೆಗೆ ವೃತ್ತಿ ಬದುಕಿಗೆ ಮಾರ್ಗಸೂಚಿ ಆಗಬಲ್ಲದು ಎಂದು ಕಾರ್ಯಕ್ರಮವನ್ನು ಉದ್ಘಾಟಿಸಿದ ಕೋಟ ಸಹಕಾರಿ ವ್ಯವಸಾಯಕ ಸಂಘ ಇದರ ಮಾಜಿ ಅಧ್ಯಕ್ಷರಾದ ಶ್ರೀ ಬಿ. ಭೋಜ ಹೆಗ್ಡೆ ಹೇಳಿದರು.
ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ವಡ್ಡರ್ಸೆಯ ಆಡಳಿತ ಮೊಕ್ತೇಸರರು ಮತ್ತು ನ್ಯಾಯವಾದಿಗಳಾದ ಕೊತ್ತಾಡಿ ಶ್ರೀ ಉದಯ ಕುಮಾರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿಗಳಾದ ಲಯನ್ ಎಂ.ಜೆ.ಎಫ್. ಶ್ರೀ ವಸಂತ್ ವಿ. ಶೆಟ್ಟಿ ಸೂರಿಬೆಟ್ಟು ಶುಭಶಂಸನೆಗೈದರು. ಉದ್ಯಮಿಗಳು ಹಾಗೂ ಕಾಲೇಜು ಆಡಳಿತ ಮಂಡಳಿ ಸದಸ್ಯರಾದ ಆನಗಳ್ಳಿ ಶ್ರೀ ಕರುಣಾಕರ ಹೆಗ್ಡೆಯವರು ದಿಕ್ಸೂಚಿ ಭಾಷಣ ಮಾಡಿ, ಎನ್.ಎಸ್.ಎಸ್.ನ ಧ್ಯೇಯ ಉದ್ದೇಶಗಳ ಕುರಿತು ವಿವರಿಸಿದರು. ಕನಕಾಂಗಿ ಕೊರಗಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ (ರಿ.), ಇದರ ಪ್ರವರ್ತಕರಾದ ಬನ್ನಾಡಿ ಶ್ರೀ ದಿನಕರ ಶೆಟ್ಟಿಯವರು ಆಶಯ ನುಡಿಗಳನ್ನಾಡಿದರು. ಉದ್ಯಮಿಗಳು ಹಾಗೂ ಕಾಲೇಜು ಆಡಳಿತ ಮಂಡಳಿಯ ಸದಸ್ಯರಾದ ಹುಂತ್ರಿಕೆ ಶ್ರೀ ಸುಧಾಕರ ಶೆಟ್ಟಿ ಅವರು ಶುಭ ಹಾರೈಸಿದರು.
ಈ ಸಂದರ್ಭ ವಡ್ಡರ್ಸೆ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ಚಂದ್ರಶೇಖರ್ ಶೆಟ್ಟಿ ಅಚ್ಲಾಡಿ, ವಡ್ಡರ್ಸೆಯ ನಿವೃತ್ತ ವಿಜಯ ಬ್ಯಾಂಕ್ ಅಧಿಕಾರಿಗಳಾದ ಶ್ರೀ ಶುಭೋದಯ ಶೆಟ್ಟಿ, ಶ್ರೀ ಉಮೇಶ್ ಶೆಟ್ಟಿ, ಜುಮ್ಮಾ ಮಸೀದಿ, ಮಧುವನ-ವಡ್ಡರ್ಸೆ ಇದರ ಅಧ್ಯಕ್ಷರಾದ ಜನಾಬ್ ಕಲಂದರ್ ಬ್ಯಾರಿ, ಕೋಟ ಶ್ರೀದೇವಿ ಜುವೆಲರ್ಸ್ನ ಮಾಲೀಕ ಶ್ರೀ ಸೀತಾರಾಮ ಆಚಾರ್ ಬನ್ನಾಡಿ, ವಡ್ಡರ್ಸೆ ಗ್ರಾಮ ಪಂಚಾಯತ್ ಸದಸ್ಯರಾದ ಕಾವಡಿ ಶ್ರೀ ಕುಶಲ ಶೆಟ್ಟಿ, ಕೈಲ್ಕೆರೆಯ ಸ.ಕಿ.ಪ್ರಾ. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸಂತೋಷ್ ಕುಮಾರ್ ಶೆಟ್ಟಿ ವಡ್ಡರ್ಸೆ, ವಡ್ಡರ್ಸೆ ಎಸ್.ಡಿ.ಎಮ್.ಸಿ., ಸ.ಹಿ.ಪ್ರಾ.ಶಾಲೆ ಅಧ್ಯಕ್ಷರಾದ ಶ್ರೀ ದಯಾನಂದ ಆಚಾರ್, ವಡ್ಡರ್ಸೆ ಗ್ರಾಮ ಪಂಚಾಯತ್‌ನ ಮಾಜಿ ಸದಸ್ಯರಾದ ಶ್ರೀ ವಿಜಯ ಕುಮಾರ್ ಶೆಟ್ಟಿ ಕೊತ್ತಾಡಿ, ಎನ್.ಎಸ್.ಎಸ್. ಸ್ವಯಂಸೇವಕ ಪ್ರತಿನಿಧಿಗಳಾದ ನಿತೇಶ್ ಕೆ. ಶೇಟ್, ಕೀರ್ತನಾ, ಆಕಾಶ್ ಬಿ. ಶೆಟ್ಟಿ, ನಿರೀಕ್ಷಾ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು, ಉಪ-ಪ್ರಾಂಶುಪಾಲ ಹಾಗೂ ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿ ಡಾ| ಚೇತನ್ ಶೆಟ್ಟಿ ಕೋವಾಡಿ ಸ್ವಾಗತಿಸಿದರು, ವಿದ್ಯಾರ್ಥಿ ಕ್ಷೇಮಪಾಲನಾ ವಿಭಾಗದ ಡೀನ್ ಶ್ರೀ ರಕ್ಷಿತ್ ರಾವ್ ಗುಜ್ಜಾಡಿ ಉದ್ಘಾಟಕರನ್ನು ಪರಿಚಯಿಸಿದರು. ಘಟಕ IIರ ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿ ದೀಪಾ ಪೂಜಾರಿ ವಂದಿಸಿದರು. ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಶ್ರೀಮತಿ ರೇಷ್ಮಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಶಿಬಿರಾರ್ಥಿ ಸುಹಾಸ್ ವಿ. ಮಲ್ಯ ಪ್ರಾರ್ಥಿಸಿದರು.