ಕುಂದಾಪುರ 12 ಮಾರ್ಚ್ 2025: ಬದುಕಿನ ಅತಿ ಮುಖ್ಯ ಮೌಲ್ಯವಾದ ಆತ್ಮವಿಶ್ವಾಸವನ್ನು ಅರ್ಜಿಸಿಕೊಂಡು ಉಳಿದೆಲ್ಲ ಜೀವನ ಮೌಲ್ಯಗಳನ್ನು ಅದಕ್ಕೆ ಜೋಡಿಸಿಕೊಂಡರೆ ಬದುಕು ಸಂಸ್ಕಾರಯುತವಾಗಿ ಪರಿಪೂರ್ಣವಾಗುತ್ತದೆ ಎಂದು ಹೆಗ್ಗುಂಜೆ ರಾಜೀವ ಶೆಟ್ಟಿ ಪದವಿ ಪೂರ್ವ ಕಾಲೇಜಿನ ಇಂಗ್ಲೀಷ್ ಉಪನ್ಯಾಸಕ ಶ್ರೀ ಗಣಪತಿ ಹೆಗಡೆ ಹೇಳಿದರು.
ಇವರು ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿ ಆಯೋಜಿಸಿದ “ಜೀವನ ಮೌಲ್ಯ” ವಿಶೇಷ ಉಪನ್ಯಾಸ ಮಾಲಿಕೆ 2ರಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಈ ಸಂದರ್ಭ ಕಾಲೇಜಿನ ಉಪ-ಪ್ರಾಂಶುಪಾಲರಾದ ಡಾ| ಚೇತನ್ ಶೆಟ್ಟಿ ಕೋವಾಡಿ ಅಧ್ಯಕ್ಷತೆ ವಹಿಸಿದ್ದರು. ಆಡಳಿತ ನಿಕಾಯಕರು ಹಾಗೂ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿಗಳಾದ ಶ್ರೀ ರಕ್ಷಿತ್ ರಾವ್ ಗುಜ್ಜಾಡಿ, ಶ್ರೀಮತಿ ರೇಷ್ಮಾ ಶೆಟ್ಟಿ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಅಭಿಷೇಕ್ ಪ್ರಾರ್ಥಿಸಿ, ರಂಜನ್ ಸ್ವಾಗತಿಸಿ, ವಿಶ್ವನಾಥ್ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿ, ಅಭಿಷೇಕ್ ವಂದಿಸಿ, ಪ್ರಸನ್ನ ನಿರೂಪಿಸಿದರು.