ಕುಂದಾಪುರ, 05 ಮಾರ್ಚ್ 2025: ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಯಕ್ಷಗಾನ ಸಂಘವು ಪ್ರಾಂಶುಪಾಲರ ಮಾರ್ಗದರ್ಶನದೊಂದಿಗೆ ವಿಸ್ತರಣಾ ಚಟುವಟಿಕೆಯ ಅಂಗವಾಗಿ ಉಡುಪಿಯಲ್ಲಿನ ಸಾಂಪ್ರದಾಯಿಕ ಯಕ್ಷಗಾನವನ್ನು ಉಳಿಸುವುದರೊಂದಿಗೆ ನವ ಕಲಾವಿದರನ್ನು ರೂಪುಗೊಳಿಸುವಲ್ಲಿ ಕಟಿಬದ್ಧವಾಗಿ ಶ್ರಮಿಸುತ್ತಿರುವ ಯಕ್ಷಗಾನ ಅಧ್ಯಯನ ಕೇಂದ್ರ, ಇಂದ್ರಾಳಿಗೆ ಭೇಟಿ ನೀಡಲಾಯಿತು.
ಈ ಸಂದರ್ಭ ಮಾಹೆ ಸಾಂಸ್ಕೃತಿಕ ಕೇಂದಗಳ ಆಡಳಿತಾಧಿಕಾರಿ ಡಾ| ಬಿ. ಜಗದೀಶ್ ಶೆಟ್ಟಿ, ಯಕ್ಷಗುರುಗಳಾದ ಶ್ರೀ ಉಮೇಶ್ ಸುವರ್ಣ, ಶ್ರೀ ಕೃಷ್ಣಮೂರ್ತಿ ಭಟ್ ಬಗ್ವಾಡಿ, ಬಸವ ಮರಕಾಲ, ಕಾಲೇಜಿನ ಆಡಳಿತ ನಿಕಾಯಕರು ಮತ್ತು ಯಕ್ಷಗಾನ ಸಂಘದ ಸಂಯೋಜಕರಾದ ಶ್ರೀ ರಕ್ಷಿತ್ ರಾವ್ ಗುಜ್ಜಾಡಿ, ಶ್ರೀ ಸುಹಾಸ್ ಜಟ್ಟಿಮನೆ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.