ಕುಂದಾಪುರ, 7 ಏಪ್ರಿಲ್ 2025: ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಕುಂದಾಪುರ ಇಲ್ಲಿನ ಗ್ರಾಹಕ ರಕ್ಷಣಾ ವೇದಿಕೆ ಅತಿಥಿ ಉಪನ್ಯಾಸವನ್ನು ಹಮ್ಮಿಕೊಂಡಿತ್ತು. ವಿಶ್ವವಿದ್ಯಾನಿಲಯ ಕಾಲೇಜು ಹಂಪನಕಟ್ಟೆ ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಡಾ. ಅಬೂಕರ್ ಸಿದ್ದಿಕ್ಕ್ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಗ್ರಾಹಕರ ಹಕ್ಕುಗಳ ಬಗ್ಗೆ ಮಾಹಿತಿ ಹಾಗೂ ಪ್ರಸ್ತುತ ವಿದ್ಯಮಾನದಲ್ಲಿ ಗ್ರಾಹಕರ ಮೇಲೆ ನಡೆಯುತ್ತಿರುವ ವಿವಿಧ ರೀತಿಯ ಅನ್ಯಾಯಗಳ ಬಗ್ಗೆ ಅರಿವು ಮೂಡಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕೆ. ಉಮೇಶ್ ಶೆಟ್ಟಿ ಅವರು ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಮೋಸ ಹೋಗುವವರು ಎಲ್ಲಿವರೆಗೆ ಇರುತ್ತಾರೋ, ಮೋಸ ಮಾಡುವವರು ಅಲ್ಲಿಯವರೆಗೂ ಬದುಕುತ್ತಾರೆ. ಹಾಗಾಗಿ ಗ್ರಾಹಕರಾದವರು ಅತ್ಯಂತ ಸೂಕ್ಷ್ಮ ಗ್ರಹಿಗಳಾಗಬೇಕು ಎಂದರು.
ಕಾಲೇಜಿನ ಉಪ-ಪ್ರಾಂಶುಪಾಲಾರದ ಡಾ. ಚೇತನ್ ಶೆಟ್ಟಿ ಕೋವಾಡಿ, ಕಾರ್ಯಕ್ರಮದ ಸಂಯೋಜಕರಾದ ಶ್ರೀಮತಿ ಅವಿತಾ ಕೊರೆಯಾ, ಶ್ರೀ ಸುಹಾಸ್ ಜೆಟ್ಟಿಮನೆ ಉಪಸ್ಥಿತರಿದ್ದರು.
ಕಾಲೇಜಿನ ದ್ವಿತೀಯ ಬಿಬಿಎನ ವಿದ್ಯಾರ್ಥಿಗಳಾದ ಅನಿಷಾ ಸ್ವಾಗತಿಸಿ, ಐಶ್ವರ್ಯ ವಂದಿಸಿ, ಅಕ್ಷಿತ ನಿರೂಪಿಸಿದರು.