ಮಂಗಳೂರು: ಅಶೋಕ ವಿದ್ಯಾಲಯ ಆಂಗ್ಲ ಮಾಧ್ಯಮ ಪ್ರೌಢಶಾಲೆ ಯಲ್ಲಿ ವಿಶ್ವ ಸಾಕ್ಷರತಾ ದಿನದ ಅಂಗವಾಗಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮಕ್ಕಳು ಸಾಕ್ಷರತೆಯ ಮಹತ್ವವನ್ನು ಕುರಿತು ಭಾಷಣವನ್ನು ಮಾಡಿದರು.

ಹಾಗೆಯೇ ಈ ಸಾಕ್ಷರತೆಯನ್ನು ಕುರಿತು ಘೋಷಣಾ ಫಲಕಗಳನ್ನು ಹಿಡಿದುಘೋಷ ವಾಕ್ಯಗಳನ್ನು ಹೇಳಿದರು. ಇಷ್ಟು ಮಾತ್ರವಲ್ಲದೆ ಸಾಕ್ಷರತೆಯನ್ನು ಕುರಿತು ಪ್ರತಿಜ್ಞಾವಿಧಿಯನ್ನು ಕೈಗೊಳ್ಳಲಾಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ಮತ್ತು ಎಲ್ಲ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.