ಮಂಗಳೂರು, 9 ಏಪ್ರಿಲ್ 2025: ಬಲ್ಲಾಳ್ ಭಾಗ್ ನ ಶ್ರೀದೇವಿ ಕಾಲೇಜಿನ ಫ್ಯಾಷನ್ ಡಿಸೈನಿಂಗ್ ವಿಭಾಗದ ವತಿಯಿಂದ ಅರೋರಾ-25, ಅಂತರ್ ಕಾಲೇಜು ಸ್ಪರ್ಧೆಗಳು ನಡೆದವು.
ಕಾರ್ಯಕ್ರಮವನ್ನು ನಟ ರಾಹುಲ್ ಅಮೀನ್ ಉದ್ಘಾಟಿಸಿ ತಮ್ಮ ಮನದ ಮಾತನ್ನು ವಿದ್ಯಾರ್ಥಿಗಳೂಂದಿಗೆ ಹಂಚುತ್ತಾ ಸ್ಪರ್ಧೆಗಳನ್ನು ಆಯೋಜಿಸಿದ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರ ಶ್ರಮವನ್ನು ಶ್ಲಾಘಿಸಿದರು.
ಫ್ಯಾಷನ್ ಡಿಸೈನಿಂಗ್ ವಿಭಾಗದ ಪ್ರಾಂಶುಪಾಲೆ ಕಸ್ತೂರಿ ಜೆ ಶೆಟ್ಟಿ ಉಪಸ್ಥಿತರಿದ್ದು , ಈ ಕಾರ್ಯಕ್ರಮದ ಹಿಂದಿರುವ ನಿರ್ವಹಣೆ ಹಾಗೂ ವಿದ್ಯಾರ್ಥಿಗಳ ಶ್ರಮವನ್ನು ಶ್ಲಾಗಿಸಿ, ಪಂದ್ಯಾಳುಗಳಾಗಿ ಭಾಗಿಯಾದವರಿಗೆ ಅಭಿನಂದಿಸಿದರು.
ವಿದ್ಯಾರ್ಥಿನಿ ಝೈಮಾ ಕಾರ್ಯಕ್ರಮ ನಿರೂಪಿಸಿದರು. ರಕ್ಷತ್ ವಿ ಕೋಟಿಯಾನ್ ಸ್ವಾಗತಿಸಿ, ಧಾತ್ರಿ ಆರ್ ಭಟ್ ವಂದಿಸಿದರು. ಮೀರಾ ಚಲನಚಿತ್ರದ ನಿರ್ಮಾಪಕರಾದ ಲಂಚುಲಾಲ್ ಹಾಗೂ ತಂಡದವರು ಉಪಸ್ಥಿತರಿದ್ದರು.
ಫ್ಯಾಷನ್ ಶೋ, ಹಾಡುಗಾರಿಕೆ, ನೃತ್ಯ, ಚಿತ್ರಕಲೆ, ಫೋಟೋಗ್ರಫಿ, ವಿಡಿಯೋಗ್ರಫಿ, ಮುಂತಾದ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ಸ್ಪರ್ಧಾಳುಗಳ ಭಾಗವಹಿಕೆ ಹಾಗೂ ನಿರೂಪಕಿಯ ನಿರೂಪಣಾ ಶೈಲಿಯು ಕಾರ್ಯಕ್ರಮವನ್ನು ಇನ್ನಷ್ಟು ಆನಂದಭರಿತಗೂಳಿಸಿತು .