ಉಜಿರೆ, 23 ಡಿಸೆಂಬರ್ 2024: ಶ್ರೀ ಧ.ಮಂ. ಅನುದಾನಿತ ಸೆಕೆಂಡರಿ ಶಾಲೆ, ಉಜಿರೆ ಇದರ ವಾರ್ಷಿಕೋತ್ಸವವು ಇಂದ್ರಪ್ರಸ್ಥ ಸಬಾಂಗಣದಲ್ಲಿ ಜರಗಿತು. ಮುಖ್ಯ ಅತಿಥಿಗಳಾದ ಸಾಹಿತಿ, ಚಿತ್ರಗಾರರಾದ ಪ್ರೋ.|| ಕಿಶೋರ್ ಪಟವರ್ಧನ್, ಹಿಂದೂ ಯುನಿವರ್ಸಿಟಿ ಬನಾರಸ್, ಆಯುರ್ವೇದ ವಿಭಾಗದಲ್ಲಿ ಬೋದಿಸುತ್ತಿರುವ ಇವರು ಶಾಲಾ ವಾರ್ಷಿಕ ಸಂಚಿಕೆ “ಬೆಳಗು” ಹಸ್ತಪತ್ರಿಕೆಯನ್ನು ಬಿಡುಗಡೆಗೊಳಿಸಿದರು.
ಇವರೊಂದಿಗೆ ನಿವೃತ್ತ ಶಿಕ್ಷಕರಾದ ಮೋಹನ್ ಎಸ್ ಜೈನ್ ನಿವೃತ್ತ ಮುಖ್ಯೋಪಾಧ್ಯಾರಾದ ಶ್ರೀಮತಿ ಕಲಾವತಿ ಮುಖ್ಯೋಪಾಧ್ಯಯರಾದ ಸುರೇಶ್.ಕೆ ಹಿರಿಯ ಶಿಕ್ಷಕಿ ವಿದ್ಯಾಕಿರಣ್, ಶಿಕ್ಷಕಿ ಲಲಿತಾ ಎಂ ಶೆಟ್ಟಿ ಮತ್ತು ಸಂಪಾದಕ ಮಂಡಳಿಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಬೆಳ್ತಂಗಡಿ ಕ್ಷೇತ್ರಶಿಕ್ಷಣಾಧಿಕಾರಿಯಾದ ಶ್ರೀಮತಿ ತಾರಕೇಸರಿ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಮುಂದಿನ ಪರೀಕ್ಷೆಗೆ ತಯಾರಿ ಈಗಲೇ ಪ್ರಾರಂಭ ಮಾಡಿ ಎಂದರು ಮಕ್ಕಳ ಭವಿಷ್ಯದ ದೃಷ್ಠಿಯಿಂದ ಪೋಷಕರ ಪಾತ್ರ ತುಂಭಾ ಮುಖ್ಯ ಮಕ್ಕಳ ಪ್ರತಿಯೊಂದು ಚಟುಚಟಿಕೆಯನ್ನು ಗಮನಿಸಬೇಕು ಎಂದರು.
ಉಜಿರೆ ಎಸ್.ಡಿ.ಯಮ್ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಧನ್ಯಕುಮಾರ್ ಕಾರ್ಯಕ್ರಮವನ್ನು ಸಿಂಗಾರ ಅರಳಿಸಿ, ನಂತರ ಮಾತಡಿದ ಅವರು ಮಕ್ಕಳ ಪ್ರತಿಭೆಗೆ ಇದೊಂದು ವೇದಿಕೆ ಎಂದು ವಿದ್ಯಾರ್ಥಿಗಳಿಗೆ ಶುಭಕೋರಿದರು.ಎಸ್.ಡಿ.ಯಮ್ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾಗಿರುವ ಶ್ರೀ ಡಾ.ಸತೀಶ್ಚಂದ್ರ ಎಸ್. ಕಾರ್ಯಕಮ್ರದಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ರತ್ನಮಾನಸದ ನಿಲಯಪಾಲಕರಾದ ಶ್ರೀ ಯತೀಶ್ ಬಳಂಜ, ರವಿಚಂದ್ರ ನಿವೃತ್ತ ಶಿಕ್ಷಕರು, ಹಿರಿಯ ವಿದ್ಯಾರ್ಥಿಗಳು ಪೋಷಕರು ಉಪಸ್ಥತರಿದ್ದರು. ವಿವಿಧ ಕೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ವಿದ್ಯಾರ್ಥಿಗಳು ಭರತನಾಟ್ಯ, ಕುಣಿತ ಭಜನೆ, ಯಕ್ಷಗಾನ, ದೇಶಭಕ್ತಿಗೀತೆ ಸಹಿತ ವಿವಿಧ ಪ್ರಕಾರಗಳ ನೃತ್ಯಗಳ ಮೂಲಕ ತಮ್ಮಲ್ಲಿರುವ ಕಲಾಪ್ರತಿಭೆಯನ್ನು ಸಭಿಕರ ಮುಂದೆ ಪ್ರದರ್ಶಿಸಿದರು. ಮುಖ್ಯೋಪಾಧ್ಯಯರಾದ ಸುರೇಶ್.ಕೆ ಸ್ವಾಗತಿಸಿ, ವಂದಿಸಿದರು ಶಿಕ್ಷಕರಾದ ಜ್ಞಾನೇಶ್, ಶ್ರೀಮತಿ ತ್ರಿವೇಣಿ ಹಾಗೂ ವಿದ್ಯಾರ್ಥಿಗಳಾದ ಧನ್ಯಶ್ರೀ, ಸಮೀಕ್ಷಾ & ವೆರೊನಿಕಾ ಪಿಂಟೋ ಕಾರ್ಯಕ್ರಮ ನಿರೂಪಿಸಿದರು.