ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇಯ ವಿದ್ಯಾರ್ಥಿಗಳು ಮಧ್ಯಪ್ರದೇಶದ ಮಂಡ್ಸೂರ್ ಸರಸ್ವತಿ ಸೈನಿಕ ಶಾಲೆಯಲ್ಲಿ ಸೆಪ್ಟೆಂಬರ್ ೧ರಿಂದ ೪ ರವರೆಗೆ ನಡೆದ ವಿದ್ಯಾಭಾರತಿ ರಾಷ್ಟ್ರೀಯ ಮಟ್ಟದ ಈಜು ಸ್ಪರ್ಧೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಮುಂದಿನ ಹಂತ ಎಸ್. ಜಿ. ಎಫ್. ಐ (ಸ್ಕೂಲ್ ಗೇಮ್ ಫೆಡರೇಶನ್ ಆಫ್ ಇಂಡಿಯಾ) ಗೆ ಆಯ್ಕೆಗೊಂಡಿದ್ದಾರೆ.
ಪುತ್ತೂರಿನ ತಾಲೂಕು ವೈದ್ಯಾಧಿಕಾರಿ ಡಾ.ದೀಪಕ್ ರೈ ಹಾಗೂ ವಜ್ರಾಕ್ಷಿ ಡಿ. ರೈ ದಂಪತಿಗಳ ಪುತ್ರ, ೧೦ ನೇ ತರಗತಿಯ ವರ್ಧಿನ್ ದೀಪಕ್ ರೈ ೫೦ಮೀಟರ್ ಬಟರ್ ಪ್ರೈ ಯಲ್ಲಿ ಚಿನ್ನ, ೫೦ ಮೀಟರ್ ಬ್ರೆಸ್ಟ್ ಸ್ಟೋಕ್ ನಲ್ಲಿ ಬೆಳ್ಳಿ ಹಾಗೂ ೧೦೦ ಮೀಟರ್ ಬ್ರೆಸ್ಟ್ ಸ್ಟೋಕ್‌ನಲ್ಲಿ ಬೆಳ್ಳಿ ಪದಕ ಗಳಿಸಿದ್ದಾರೆ. ಪರ್ಲಡ್ಕದ ಲತಾ ಚಿಕ್ಕಪುತ್ತೂರು ಅವರ ಪುತ್ರ, ೬ನೇ ತರಗತಿಯ ಪ್ರತ್ಯುಷ್ ಎಲ್.ಎಸ್ ಗೌಡ ೫೦ಮೀಟರ್ ಬ್ಯಾಕ್ ಸ್ಟೋಕ್ ನಲ್ಲಿ ಚಿನ್ನ, ೫೦ಮೀಟರ್ ಬಟರ್ ಪ್ರೈ ನಲ್ಲಿ ಕಂಚು ಮತ್ತು ೪x೧೦೦ಮೀಟರ್ ಮೆಡ್ಲೇ ರಿಲೇಯಲ್ಲಿ ಚಿನ್ನ ಪಡೆದಿದ್ದಾರೆ. ಪುತ್ತೂರಿನ ಕೊಠಾರಿ ರವಿಕುಮಾರ್ ತುಳಸಿದಾಸ್ ಹಾಗೂ ಕೊಠಾರಿ ಲಕ್ಷ್ಮೀ ಬೆನ್ ರವಿಕುಮಾರ್ ದಂಪತಿ ಪುತ್ರಿ, ೮ನೇ ತರಗತಿಯ ಮೆಹೆಕ್ ರವಿಕುಮಾರ್ ಕೊಠಾರಿ ೧೦೦ ಮೀಟರ್ ಬ್ಯಾಕ್ ಸ್ಟೋಕ್ ನಲ್ಲಿ ಚಿನ್ನ ಗೆದ್ದು ಸಂಭ್ರಮಿಸಿದ್ದಾರೆ.
ಈ ಎಲ್ಲಾ ವಿದ್ಯಾರ್ಥಿಗಳು ನವೆಂಬರ್ ತಿಂಗಳಲ್ಲಿ ಗುಜರಾತ್‌ನ ರಾಜಕೋಟ್‌ನಲ್ಲಿ ನಡೆಯುವ ಮುಂದಿನ ಹಂತದ ಎಸ್.ಜಿ.ಎಫ್.ಐ (ಸ್ಕೂಲ್ ಗೇಮ್ ಫೆಡರೇಶನ್ ಆಫ್ ಇಂಡಿಯಾ) ಮೀಟ್‌ನಲ್ಲಿ ಭಾಗವಾಹಿಸಲಿದ್ದಾರೆ ಎಂದು ಶಾಲಾ ಪ್ರಕಟನೆ ತಿಳಿಸಿದೆ. ವಿದ್ಯಾರ್ಥಿಗಳು ಪುತ್ತೂರು ಬಾಲವನದ ಈಜು ತರಬೇತುದಾರರಾದ ಪಾರ್ಥ ವಾರಣಾಸಿ ಹಾಗೂ ದೀಕ್ಷಿತ್ ರಾವ್ ಇವರಿಂದ ಈಜು ತರಬೇತಿ ಪಡೆದು ಕೊಂಡಿರುತ್ತಾರೆ.