ಪುತ್ತೂರು, 23 ಜನವರಿ 2025: ನಗರದ ನಟ್ಟೋಜ ಫೌಂಡಶನ್ ಮುನ್ನಡೆಸುತ್ತಿರುವ,ಬಪ್ಪಲಿಗೆಯ ಅಂಬಿಕಾ ಸಿ ಬಿ ಎಸ್ ಇ ವಿದ್ಯಾಲಯದಲ್ಲಿ ನೇತಾಜಿ ಸುಭಾಶ್ಚಂದ್ರ ಬೋಸ್ ಅವರ ಜನ್ಮ ದಿನ, ‘ಪರಾಕ್ರಮ ದಿವಸ್’ ಅನ್ನು ಆಚರಿಸಲಾಯಿತು. 4ನೇ ತರಗತಿ ಯ ಸಮರ್ಥ ಸುದರ್ಶನ್ ನೇತಾಜಿ ಅವರ ವೇಷ ಧರಿಸಿ ಘೋಷಣೆ ಗಳನ್ನು ಕೂಗಿ ವಿದ್ಯಾರ್ಥಿಗಳನ್ನು ದೇಶಸೇವೆಗೆ ಹುರಿದುಂಬಿಸಿದರು.
ಕಾರ್ಯಕ್ರಮದಲ್ಲಿ7 ನೇ ತರಗತಿಯ ಸ್ಕಂದ ಎಸ್ ರೈ,ಬಾಲ್ಯದಲ್ಲಿ ತುಂಬಾ ಬುದ್ದಿವಂತರಾಗಿದ್ದ ನೇತಾಜಿ ದೊಡ್ಡವರಾಗಿ ದೇಶಕ್ಕಾಗಿ ಹಾಗೂ ದೇಶದ ಸ್ವಂತತ್ರಕ್ಕಾಗಿ ಹೋರಾಡಿದರೆನ್ನುತ್ತಾ ಅವರ ಹಿನ್ನಲೆ ಯನ್ನು ವಿವರಿಸಿದರು. ಕ್ರಾಂತಿ ಯೇ ಸ್ವಾತಂತ್ರ್ಯ ಹೋರಾಟಕ್ಕೆ ಸರಿಯಾದ ದಾರಿ ಎಂದು, ಬೇರೆ ಬೇರೆ ದೇಶಗಳಿಗೆ ಹೋಗಿ ಸೈನಿಕರನ್ನು ತಯಾರು ಮಾಡಿ, ಹೋರಾಟ ಮಾಡುತ್ತಾ ಕೊನೆಗೆ ಅದೇ ಉದ್ದೇಶಕ್ಕಾಗಿ ಯಾತ್ರೆಯಲ್ಲಿದ್ದಾಗ ವೀರ ಮರಣ ಹೊಂದಿದರು ಎಂದು ಅವರ ಸಾಹಸವನ್ನು7ನೇ ತರಗತಿಯ ಈಶಾನ್ ಶಾಸ್ತ್ರಿ ವಿವರಿಸಿದರು. ಕು. ಅದಿಶ್ರೀ ಹಾಗೂ ತಂಡದವರು ನೇತಾಜಿ ಅವರ ವೀರ ಗೀತೆ ಹಾಡಿದರು.ಶಾಲಾ ಪ್ರಾಂಶುಪಾಲೆ ಕು ಮಾಲತಿ. ಡಿ, ಉಪಪ್ರಾಂಶುಪಾಲೆ ಶ್ರೀಮತಿ ಸುಜನಿ ಬೋರ್ಕರ್, ಶಾಲಾ ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. 8 ನೇ ತರಗತಿ ಯ ಅದಿತಿ. ಏನ್. ಶೆಟ್ಟಿ, ಕಾರ್ಯಕ್ರಮ ನಿರೂಪಿಸಿ, ಸ್ವಾಗತ ಮಾಡಿದರು ಹಾಗೂ ವಂದಿಸಿದರು.