ಪುತ್ತೂರು : ಜನ ನಮ್ಮಲ್ಲಿ ಏನು ಕೇಳುತ್ತಾರೋ ಅದನ್ನು ನಾವು ಕೊಡುವುದು ನಿಜವಾದ ವ್ಯವಹಾರ. ಹಾಗಾಗಿ ಮಕ್ಕಳು ಮಾರುಕಟ್ಟೆ ಮೇಳದ ವ್ಯವಹಾರದಲ್ಲಿ ಸರಿಯಾದ ಪರಿಶ್ರಮದಿಂದ ಕಾರ್ಯ ಸಾಧಿಸಿದರೆ ಯಶಸ್ಸು ಕಟ್ಟಿಟ್ಟದ್ದು ಎಂಬುದಾಗಿ ದ್ವಾರಕಾ ಸಮೂಹ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಗೋಪಾಲಕೃಷ್ಣ ಭಟ್ ಎ ರವರು ಹೇಳಿದರು. ಅವರು ಬಪ್ಪಳಿಗೆಯ ಅಂಬಿಕಾ ಸಿಬಿಎಸ್ಇ ವಿದ್ಯಾಲಯದಲ್ಲಿ ನವೆಂಬರ್ 16 ರಂದು ನಡೆದ ಮಕ್ಕಳ ಮಾರುಕಟ್ಟೆ ಮೇಳದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಉದ್ಘಾಟನಾ ಕಾರ್ಯಕ್ರಮವನ್ನು ನೆರವೇರಿಸಿ ಈ ಮಾತುಗಳನ್ನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಸುಬ್ರಹ್ಮಣ್ಯ ನಟ್ಟೋಜರವರು ಜೀವನದಲ್ಲಿ ಕೆಲವೊಂದು ಅನಿವಾರ್ಯ ಪರಿಸ್ಥಿತಿಯು ನಮ್ಮನ್ನು ಒಳ್ಳೆಯ ದಾರಿಗೆ ಕೊಂಡೊಯ್ಯುತ್ತದೆ. ಮೂಲವಾದ ಧ್ಯೇಯವಿದ್ದರೆ ಮಾತ್ರ ಸಾಧನೆ ಸಾಧ್ಯ. ಜಗತ್ತಿನಲ್ಲಿ ಸೃಜನಶೀಲ ವ್ಯಕ್ತಿಗಳಾಗಿ ಮೂಡಿಬರಲು ಇದೊಂದು ಉತ್ತಮ ವೇದಿಕೆ ಎಂಬುದಾಗಿ ಹೇಳಿದರು.
ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಯ ಕೋಶಾಧಿಕಾರಿಗಳಾದ ರಾಜಶ್ರೀ ನಟ್ಟೋಜ, ಶಾಲಾ ಪ್ರಾಂಶುಪಾಲರಾದ ಕುಮಾರಿ ಮಾಲತಿ ಡಿ ಮತ್ತು ಉಪ ಪ್ರಾಂಶುಪಾಲರಾದ ಸುಜನಿ ಬೋರ್ಕರ್ ರವರು ಉಪಸ್ಥಿತರಿದ್ದರು.
8ನೇ ತರಗತಿಯ ವಂಶಿಕ ರೈಯವರು ಸ್ವಾಗತಿಸಿದರು. 7ನೇ ತರಗತಿಯ ಅನ್ವಿತಾ ಎಸ್ ರವರು ಧನ್ಯವಾದ ಸಲ್ಲಿಸಿದರು. 10ನೇ ತರಗತಿಯ ನಿಯತಿ ಭಟ್ ಮತ್ತು ಜಯಲಕ್ಷ್ಮಿ ಯವರು ಕಾರ್ಯಕ್ರಮವನ್ನು ನಿರ್ವಹಿಸಿದರು.
ಉದ್ಘಾಟನಾ ಕಾರ್ಯಕ್ರಮದ ನಂತರ 6ರಿಂದ 10ನೇತರಗತಿಯ ವಿದ್ಯಾರ್ಥಿಗಳು ಶಾಲಾ ಆವರಣದ ಶಂಕರ ಸಭಾಭವನದಲ್ಲಿ ವಿವಿದ ರೀತಿಯ ಮಳಿಗೆಗಳನ್ನು ಇಟ್ಟು ವ್ಯವಹಾರದ ಚಾಣಾಕ್ಷತೆಯೊಂದಿಗೆ ಮಕ್ಕಳ ಮಾರುಕಟ್ಟೆ ಮೇಳವನ್ನು ಯಶಸ್ವಿಗೊಳಿಸಿದರು. ಶಾಲಾ ವಿದ್ಯಾರ್ಥಿಗಳ ಹೆತ್ತವರು ಮತ್ತು ಪೋಷಕರು ಈ ಕಾರ್ಯಕ್ರಮದಲ್ಲಿ ಕೇಂದ್ರಬಿಂದುವಾಗಿ ಭಾಗವಹಿಸಿ ಮಾರುಕಟ್ಟೆ ಮೇಳದ ಯಶಸ್ಸಿಗೆ ಕೈಜೋಡಿಸಿದರು.