ಪುತ್ತೂರು: ಕ್ರೀಡೆ ಸಾಧಕನ ಸ್ವತ್ತು, ಸೋಮಾರಿಯ ಸ್ವತ್ತಲ್ಲ – ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ದೈಹಿಕ ಮಾನಸಿಕ ಸದೃಢತೆ ಹೆಚ್ಚಾಗುತ್ತದೆ ಹಾಗೂ ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಸರಕಾರಿ ಉದ್ಯೋಗದಲ್ಲಿ 2% ಮೀಸಲಾತಿ ಇರುತ್ತದೆ. ಕೇವಲ ಪ್ರಶಸ್ತಿ ಮುಖ್ಯವಲ್ಲ ಪ್ರತಿಭೆಯನ್ನು ಹೊರಹಾಕಲು ಸಿಕ್ಕುವ ಅವಕಾಶ ಮುಖ್ಯ ಅಂತಹ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸುವಂತಹ ಅವಕಾಶ ನಿಮಗೆ ಸಿಗಲಿ.ಅವರು ಕೊಂಬೆಟ್ಟಿನ ತಾಲೂಕು ಕ್ರೀಡಾಂಗಣದಲ್ಲಿ ನಡೆದ ನಗರದ ನಟ್ಟೋಜಾ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ವಿದ್ಯಾಲಯ ಸಿಬಿಎಸ್ಇ ಯ ವಾರ್ಷಿಕ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಶ್ರೀನಿವಾಸ್ ಗೌಡ ದೈಹಿಕ ಶಿಕ್ಷಕರು ,ವಿಠಲ್ ಪದವಿ ಪೂರ್ವ , ವಿಟ್ಲ ಇವರು ಮಾತನಾಡಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಅಂಬಿಕಾ ವಿದ್ಯಾಲಯ ಸಿಬಿಎಸ್ಇಯ ಪ್ರಾಂಶುಪಾಲರಾದ ಕುಮಾರಿ ಮಾಲತಿ ಡಿ ಇವರು ಮಾತನಾಡಿ ಈ ಕ್ರೀಡೆಗಳು ವಿದ್ಯಾರ್ಥಿಗಳಿಗೆ ಹೊಸ ವಿಷಯಗಳನ್ನು ಕಲಿಸುತ್ತದೆ ಮತ್ತು ಅವರು ಬೇರೆಯವರೊಂದಿಗೆ ಭಾಂಧವ್ಯವನ್ನು ಹೊಂದಿರುತ್ತಾರೆ ಕ್ರೀಡೆಗಳು ಅವರಿಗೆ ಆತ್ಮಸ್ಥೈರ್ಯ ಮತ್ತು ಧೈರ್ಯವನ್ನು ಬೆಳೆಸಲು ಸಹಾಯ ಮಾಡುತ್ತದೆ ಹಾಗೂ ಟೀಮ್ ವರ್ಕ್ ಗುಣಮಟ್ಟವನ್ನು ನಮಗೆ ಕಲಿಸುತ್ತದೆ ಇದರ ಎಲ್ಲದರೊಂದಿಗೆ ಇಂದು ಪ್ರಕೃತಿಯು ಕೂಡ ನಿಮ್ಮನ್ನು ಸಹಕರಿಸಿದೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಐರಾವತ ,ಅಮೃತ , ಕಾಮಧೇನು, ಕಲ್ಪವೃಕ್ಷ ತಂಡದ ವಿದ್ಯಾರ್ಥಿಗಳು ಮನೋಹರವಾಗಿ ಪಥಸಂಚಲನ ನಡೆಸಿಕೊಟ್ಟರು. ಸಭಾ ಕಾರ್ಯಕ್ರಮಕ್ಕೂ ಪೂರ್ವದಲ್ಲಿ 3000 ಮೀಟರ್ ,1500 ಮೀಟರ್,800 ಮೀಟರ್ , ಈಟಿ ಎಸೆತ ಸ್ಪರ್ಧೆಗಳನ್ನು ನಡೆಸಲಾಯಿತು.
ರಾಜ್ಯಮಟ್ಟದ ಕ್ರೀಡಾ ವಿಜೇತರಾದ 10ನೇ ತರಗತಿಯ ವರ್ಧಿನ್ ರೈ , 8ನೇ ತರಗತಿಯ ದೃಶಾನಸುರೇಶ್ ಸರಳಿಕಾನ, 8ನೇ ತರಗತಿಯ ಮೆಹಕ್ ಕೊಟ್ಟಾರಿ , 6ನೇ ತರಗತಿಯ ಪ್ರತ್ಯೂಷ್ .ಎಲ್ ಗೌಡ ಇವರು ಕ್ರೀಡಾ ಜ್ಯೋತಿಯನ್ನು ಕ್ರೀಡಾಂಗಣಕ್ಕೆ ತೆಗೆದುಕೊಂಡು ಬಂದರು .
ಅಂಬಿಕಾ ವಿದ್ಯಾಲಯದ ವಿದ್ಯಾರ್ಥಿಗಳಾದ 5 ನೇ ತರಗತಿಯ ಎಸ್ .ಮಯೂರ್, 8ನೇ ತರಗತಿಯ ಶ್ರೇಯಸ್ , 8ನೇ ತರಗತಿಯ ಆದಿತ್ಯ ಕೃಷ್ಣ ಕಾರ್ಯಕ್ರಮದಲ್ಲಿ ಪ್ರಾರ್ಥಿಸಿದರು, 9ನೇ ತರಗತಿಯ ಮಂದಿರಾ ಕಜೆ ಸ್ವಾಗತಿಸಿದರು,8ನೇ ತರಗತಿಯ ಹೃನ್ಮಯಿ ಶೆಟ್ಟಿ ಅತಿಥಿ ಪರಿಚಯ ಮಾಡಿಕೊಟ್ಟರು, 8ನೇ ತರಗತಿಯ ಕುವಿರ ವಂದಿಸಿದರು, ಶಾಲೆಯ ಉಪಪ್ರಾಂಶುಪಾಲರಾದ ಶ್ರೀಮತಿ ಸುಜನಿ ಬೋರ್ಕರ್ ಹಾಗೂ ಶಿಕ್ಷಕ ಹೇಮಂತ್ ಕಾರ್ಯಕ್ರಮವನ್ನು ನಿರೂಪಿಸಿದರು.