ಪುತ್ತೂರು: ಮಂಗಳೂರಿನ ಶಾರದಾ ವಿದ್ಯಾಲಯದಲ್ಲಿ ನಡೆದ ವಿದ್ಯಾಭಾರತಿ ಜಿಲ್ಲಾಮಟ್ಟದ ವಿವಿಧ ಅಥ್ಲೆಟಿಕ್ಸ್ ಸ್ಪರ್ಧೆಗಳಲ್ಲಿ ನಗರದ ನಟ್ಟೋಜ ಫೌಂಡೇಶನ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯ ವಿದ್ಯಾರ್ಥಿಗಳಾದ ೧೦ನೇ ತರಗತಿ ವಿದ್ಯಾರ್ಥಿನಿ ಹಿತಾಲಿ ಪ್ರಸನ್ನ ಶೆಟ್ಟಿ ೧೭ ವಯೋಮಾನದ ಈಟಿ ಎಸೆತದಲ್ಲಿ ಪ್ರಥಮ, ಚಕ್ರ ಎಸೆತದಲ್ಲಿ ದ್ವಿತೀಯ ಸ್ಥಾನ ಪಡೆದರೆ, ೧೦ನೇ ತರಗತಿಯ ಅವನಿ ಯು. ಗುಂಡು ಎಸೆತದಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ.
೯ನೇ ತರಗತಿಯ ತನ್ವಿ ಎ ರೈ ತ್ರಿವಿಧಜಿಗಿತದಲ್ಲಿ ತೃತೀಯ ಸ್ಥಾನ ಗಳಿಸಿದ್ದಾರೆ. ೧೪ ವಯೋಮಾನದ ವರ್ಗದಲ್ಲಿ ೮ನೇ ತರಗತಿಯ ದೃಶಾನ ಸುರೇಶ್ ಸರಳಿಕಾನ ೧೦೦ ಮೀಟರ್ ಮತ್ತು ೨೦೦ ಮೀಟರ್ ಓಟದಲ್ಲಿ ದ್ವಿತೀಯ, ಉದ್ದ ಜಿಗಿತ ಪ್ರಥಮ, ೪x೧೦೦ ರಿಲೇ ದ್ವಿತೀಯ ಸ್ಥಾನಕ್ಕೆ ಭಾಜನರಾದರೆ ೯ನೇ ತರಗತಿಯ ಲಾಸ್ಯ ಸಂತೋಷ್ ಚಕ್ರ ಎಸೆತದಲ್ಲಿ ದ್ವಿತೀಯ, ೮ನೇ ತರಗತಿಯ ಬಿ. ತ್ರಿಶಾ ಉದ್ದ ಜಿಗಿತ ತೃತೀಯ ಹಾಗೂ ೪x೧೦೦ ರಿಲೇಯಲ್ಲಿ ದ್ವಿತೀಯ ಸ್ಥಾನ ಗಳೀಸಿದ್ದಾರೆ. ೮ನೇ ತರಗತಿಯ ಅದಿತಿ ಎನ್ ಶೆಟ್ಟಿ ೪×೧೦೦ ರಿಲೇ ದ್ವಿತೀಯ ಹಾಗೂ ೭ನೇ ತರಗತಿಯ ಪೂರ್ವಿ ವಿ. ೪x೧೦೦ ರಿಲೇಯಲ್ಲಿ ದ್ವಿತೀಯ ಸ್ಥಾನ ಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ