ಕಕ್ಯಪದವು, ಆಗಸ್ಟ್ 15, 2024 : ಬಂಟ್ವಾಳ ತಾಲೂಕು ಉಳಿ ಗ್ರಾಮದ ಎಲ್.ಸಿ.ಆರ್ ಇಂಡಿಯನ್ ವಿದ್ಯಾಸಂಸ್ಥೆ ಕಕ್ಯಪದವು ಇಲ್ಲಿ “ತುಳುವರ ಬದುಕಿನ ಅನಾವರಣ ” ಎಂಬ ಪರಿಕಲ್ಪನೆಯಲ್ಲಿ ವಿಶೇಷ ಕಾರ್ಯಕ್ರಮವನ್ನು ಏರ್ಪಡಿಸಿ ತರಗತಿವಾರು ಸ್ಪರ್ಧೆಯನ್ನು ನಡೆಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಬಬಿತಾ ಆರ್.ನಾಥ್ ಹಾಗೂ ಕಾರ್ಯದರ್ಶಿ ಶಿವಾನಿ ಆರ್ ನಾಥ್ ದೀಪ ಬೆಳಗಿಸಿ ಉದ್ಘಾಟಿಸಿ ಆಟಿಕಳೆಂಜನ ಕುಣಿತದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಹಿಂದಿನ ಕಾಲದ ತುಳುವರ ಬದುಕಿನ ಅನಾವರಣದೊಂದಿಗೆ ಸಂಸ್ಕೃತಿ ಸಂಪ್ರದಾಯಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ತುಳುನಾಡಿನ ವಿಶೇಷ ಖಾದ್ಯಗಳನ್ನು, ಔಷಧೀಯ ಗಿಡಮೂಲಿಕೆಗಳನ್ನು,ಹಾಗೂ ಹಳೆಯ ಕಾಲದ ವಸ್ತುಗಳನ್ನು ಪ್ರದರ್ಶಿಸಲಾಯಿತು
ಮುಖ್ಯ ಅತಿಥಿಗಳಾಗಿ ಶ್ರೀಯುತ ಹರಿಶ್ಚಂದ್ರ ಪೂಜಾರಿ ಕೇರ್ಯ ಉದ್ಯಮಿಗಳು, ಶ್ರೀಯುತ ಗುರುಪ್ರಕಾಶ್ ಕೊರಡಿಂಗೇರಿ, ಲೆಕ್ಕ ಪರಿಶೋಧಕರು ಉಳಿ ಸೇವಾ ಸಹಕಾರಿ ಬ್ಯಾಂಕ್ ಕಕ್ಯ ಸಂಸ್ಥೆಯ ಪ್ರಾಂಶುಪಾಲರಾದ ಶ್ರೀಯುತ ಜೋಸ್ಟನ್ ಲೋಬೊ , ಸಂಯೋಜಕರಾದ ಶ್ರೀಯತ ಯಶವಂತ್ ಜಿ.ನಾಯಕ್ ಪ್ರಾಥಮಿಕ ಮತ್ತು ಪೌಢ ವಿಭಾಗದ ಮುಖ್ಯಶಿಕ್ಷಕಿ ಕು.ವಿಜಯಾ.ಕೆ ಉಪಸ್ಥಿತರಿದ್ದರು. ಕಾಲೇಜು ವಿಭಾಗದ ಉಪನ್ಯಾಸಕಿ ವಿಂದ್ಯಾಶ್ರೀ ಕಾರ್ಯಕ್ರಮ ನಿರೂಪಿಸಿದರು.